ಧಾರವಾಡ: ಕೃಷಿಯಲ್ಲಿ ದಿನಕ್ಕೊಂದು ಆವಿಷ್ಕಾರ ಮಾಡಲಾಗುತ್ತದೆ. ಬಿತ್ತನೆ ಹಾಗೂ ಕೊಯ್ಲು ಮಾಡುವುದಕ್ಕೆ ನವನವೀನ ಯಂತ್ರಗಳು ಬಂದಿವೆ. ಅದೇ ರೀತಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಲು ರೈತರು ಡ್ರೋನ್ ಮೊರೆ ಹೋಗಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಈರಣ್ಣ ವಡ್ಡಟ್ಟಿ ಎಂಬ ರೈತರೊಬ್ಬರು ತಮ್ಮ ನಾಲ್ಕು ಎಕರೆ ಜಮೀನಿನ ಹೆಸರು ಬೆಳೆಗೆ ಡ್ರೋಣ್ ಮೂಲಕ ಕ್ರಿಮಿನಾಶಕ ಸಿಂಪಡಿಸಿ ತಂತ್ರಜ್ಞಾನದ ಕೃಷಿಗೆ ಮುಂದಾಗಿದ್ದಾರೆ. ಧಾರವಾಡದಲ್ಲಿ ಬಾಡಿಗೆ ಡ್ರೋನ್ ಪಡೆದುಕೊಂಡು ಬಂದ ರೈತ ಇಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಈ ಡ್ರೋನ್ ಏಳು ನಿಮಿಷಕ್ಕೆ ಒಂದು ಎಕರೆಗೆ ಕ್ರಿಮಿನಾಶಕ ಸಿಂಪಡಿಸುತ್ತದೆ.