ಧಾರವಾಡ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಇನ್ನೂರು ವರ್ಷಗಳ ಐತಿಹಾಸಿಕ ಉರುಸ್ಗೆ ಭಕ್ತರ ಸಂಖ್ಯೆ ಕಡಿಮೆಯಾಗಿದೆ.
ಕೊರೊನಾ ಎಫೆಕ್ಟ್: ಐತಿಹಾಸಿಕ ಉರುಸ್ಗೆ ಬಾರದ ಭಕ್ತರು...
ಮಾರಣಾಂತಿಕ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐತಿಹಾಸಿಕ ಉರುಸ್ ಅನ್ನು ಸರಳವಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ.
ಐತಿಹಾಸಿಕ ಉರುಸ್ಗೆ ಬಾರದ ಭಕ್ತರು
ಧಾರವಾಡ ತಾಲೂಕಿನ ವರನಾಗಲಾಂವಿ ಗ್ರಾಮದಲ್ಲಿ ಉರುಸ್ ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿವರ್ಷ ವಿಜೃಂಭಣೆಯಿಂದ ಜರುಗುತ್ತಿರುವ ಇಲ್ಲಿನ ಹಜರತ್ ಸಯ್ಯದ್ ದಾದಾಫೀರ್ ಖಾದ್ರಿ ದರ್ಗಾದ ಉರುಸ್ ಸಂಭ್ರಮವನ್ನು ಕೊರೊನಾ ಕಿತ್ತುಕೊಂಡಿದೆ.
ದರ್ಗಾದ ವತಿಯಿಂದ ಉರುಸ್ಗೆ ಹೆಚ್ಚು ಜನರು ಬರದಂತೆ ಸಹ ಮನವಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ಸಂದಲ್ ಮತ್ತು ಉರುಸ್ ಅನ್ನು ಸರಳವಾಗಿ ಆಚರಿಸಲಾಗುತ್ತಿದೆ.