ಹುಬ್ಬಳ್ಳಿ:ಬೆಳಗಾವಿ ವಿಭಾಗದ ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್ಗಳಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೆಸರು ಕೈ ಬಿಡಲಾಗಿದ್ದು, ಇದು ಕುಲಕರ್ಣಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಬ್ಯಾನರ್, ಬಂಟಿಂಗ್ಗಳಲ್ಲಿ ವಿನಯ್ ಕುಲಕರ್ಣಿ ಹೆಸರು ನಾಪತ್ತೆ.. ಅಭಿಮಾನಿಗಳ ಆಕ್ರೋಶ
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶದ ಬ್ಯಾನರ್, ಬಂಟಿಂಗ್ಸ್ಗಳಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಹೆಸರು ಕೈ ಬಿಡಲಾಗಿದ್ದು, ಇದಕ್ಕೆ ಕುಲಕರ್ಣಿ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶಕ್ಕೆ ಕಳೆದ ನಾಲ್ಕೈದು ದಿನಗಳಿಂದ ತಯಾರಿ ನಡೆಸಲಾಗುತ್ತಿದ್ದು, ಬಹುತೇಕ ಬ್ಯಾನರ್ ಬಂಟಿಂಗ್ಸ್ಗಳಲ್ಲಿ ವಿನಯ ಕುಲಕರ್ಣಿಯವರ ಭಾವಚಿತ್ರ ಕೈಬಿಡಲಾಗಿದೆ. ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ನವೆಂಬರ್ ಐದರಂದು ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭಾವಚಿತ್ರ ಕಡೆಗಣನೆಗೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಲಕರ್ಣಿ ಜೈಲು ಪಾಲಾಗಿರುವುರಿಂದ ಫೋಟೋ ಹಾಕಿದ್ರೆ, ಪಕ್ಷದ ಸಂಘಟನೆ ಮೇಲೆ ಪ್ರಭಾವ ಬೀರುವ ಕಾರಣದಿಂದ ಕೈಬಿಡಲಾಗಿದೆ ಎನ್ನಲಾಗಿದೆ.