ಕರ್ನಾಟಕ

karnataka

ETV Bharat / city

ಶಿಕ್ಷಕ ಹುದ್ದೆ ಖಾಯಂ ನಂಬಿಸಿ ವಂಚನೆ: ಹುಬ್ಬಳ್ಳಿಯಲ್ಲಿ ಮೂವರ ವಿರುದ್ಧ ದೂರು

ದೈಹಿಕ ಶಿಕ್ಷಕ ಹುದ್ದೆ ಖಾಯಂ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬನಿಂದ 3 ಲಕ್ಷ ರೂ ಚೆಕ್​ ಹಾಗೂ 3 ಲಕ್ಷ ರೂ. ನಗದು ಪಡೆದು ವಂಚಿಸಿದ ಪ್ರಕರಣದಲ್ಲಿ ಇದೀಗ ಮೂವರ ಮೇಲೆ ಕೇಸ್​ ದಾಖಲಾಗಿದೆ.

By

Published : Jun 24, 2021, 2:21 PM IST

Hubli
Hubli

ಹುಬ್ಬಳ್ಳಿ:ನಗರದ ಮಂಟೂರ ರಸ್ತೆಯ ಮಿಲ್ಲತ್ ನಗರದಲ್ಲಿರುವ ರಿಯಾಜುಲ್ ಉಲೂಮ್ ಉರ್ದು ಪ್ರೌಢಶಾಲೆ, ಉರ್ದು ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಯಂ ಮಾಡಿಸುವುದಾಗಿ ನಂಬಿಸಿ 3 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಚೆಕ್ ಪಡೆದು ವಂಚಿಸಿದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಉರ್ದು ಪ್ರೌಢಶಾಲೆ‌ ಆಡಳಿತ ಮಂಡಳಿಯ ಕಾರ್ಯದರ್ಶಿ ಅಹ್ಮದ್ಜಲಾಲ್ ಫೈಜಾಬಾದಿ, ಮುಖ್ಯ ಶಿಕ್ಷಕಿ ಬಿ.ಎ ಶೇಖ ಮತ್ತು ಬಾಬು ಎಂಬುವವರು ಹಣ ಹಾಗೂ ಚೆಕ್ ಪಡೆದು ವಂಚಿಸಿದ್ದಾರೆ ಎಂದು ವಂಚನೆಗೆೊಳಗಾದ ಶಿಕ್ಷಕ ಜಾಕೀರ್ ಹುಸೇನ್ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲೆಯಲ್ಲಿರುವ ದೈಹಿಕ ಶಿಕ್ಷಕ ಹುದ್ದೆ ಖಾಯಂ ಮಾಡುವುದಾಗಿ 2016ರ ಸೆಪ್ಟೆಂಬರ್ 8ರಂದು ಆರೋಪಿಗಳು ಮೂರು ಲಕ್ಷ ನಗದು ಹಾಗೂ ಮೂರು ಲಕ್ಷ ಮೌಲ್ಯದ ಚೆಕ್ ಪಡೆದಿದ್ದರು. ಆದ್ರೆ ಕಳೆದ 6 ತಿಂಗಳಿನಿಂದ ವೇತನ, ಹುದ್ದೆಯನ್ನು ಸಹ ಖಾಯಂ ಮಾಡಿಲ್ಲವೆಂದು ವಂಚನೆಗೆ ಒಳಗಾದ ಶಿಕ್ಷಕ ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಳೇ ಹುಬ್ಬಳ್ಳಿ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details