ಕರ್ನಾಟಕ

karnataka

ETV Bharat / city

ಉಪಚುನಾವಣೆ:ಮುಗಿದ ಮತದಾನ, ಅಭ್ಯರ್ಥಿಗಳ ಹಣೆಬರಹ 23ಕ್ಕೆ ಪ್ರಕಟ

By

Published : May 19, 2019, 7:57 AM IST

Updated : May 19, 2019, 8:07 PM IST

ಉಪ ಚುನಾವಣೆ

2019-05-19 19:44:46

     ಕುಂದಗೋಳ ವಿಧಾನಸಭಾ ಉಪಚುನಾವಣೆ

  • ಒಟ್ಟು ಶೇ.82.42 ರಷ್ಟು ಮತದಾನ

     ಚಿಂಚೋಳಿ ವಿಧಾನಸಭಾ ಉಪಚುನಾವಣೆ

  • ಒಟ್ಟು ಶೇ.70.30 ರಷ್ಟು ಮತದಾನ

2019-05-19 18:14:47

        ಚಿಂಚೋಳಿ ಉಪಚುನಾವಣೆ

  • ಸಂಜೆ 5 ಗಂಟೆವರೆಗೆ ಶೇ.64.40 ರಷ್ಟು ಮತದಾನ

        ಕುಂದಗೋಳ ಉಪಚುನಾವಣೆ 

  • ಸಂಜೆ 5 ಗಂಟೆವರೆಗೆ ಶೇ.73 ರಷ್ಟು ಮತದಾನ 

2019-05-19 18:11:59

ಕಲಬುರಗಿ:ಬಿಸಿಲು ವಿಪರೀತವಾದ ಹಿನ್ನಲೆ ವಿವಿಪ್ಯಾಟ್ ಕೈ ಕೊಟ್ಟು ಮತದಾರರು ಪರದಾಡಿದ ಘಟನೆ ಚಿಂಚೋಳಿ ಕ್ಷೇತ್ರ ವ್ಯಾಪ್ತಿಯ ನರನಾಳ ಮತಕೇಂದ್ರದಲ್ಲಿ ನಡೆದಿದೆ. 

ಗ್ರಾಮದ ಪೊಲಿಂಗ್ ಬೂತ್ ಸಂಖ್ಯೆ 89ರಲ್ಲಿ ಬಿಸಿಲಿನಿಂದ ನಾಲ್ಕು ಬಾರಿ ಮಷಿನ್ ಕೈಕೊಟ್ಟಿದೆ. ಇದರಿಂದ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಒಟ್ಟು 1,200 ಮತಗಳಿದ್ದು ಸಂಜೆ 4 ಗಂಟೆವರೆಗೆ ಕೇವಲ 600 ಜನ ಮಾತ್ರ ಮತಚಲಾಯಿಸಿದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸರಿಪಡಿಸುವಲ್ಲಿ ವಿಫಲರಾಗಿದ್ದು, ಮತದಾರರ ಆಕ್ರೋಶಕ್ಕೆ ಕಾರಣವಾಗಿತ್ತು.

2019-05-19 17:14:28

       ಕುಂದಗೋಳ ಉಪಚುನಾವಣೆ

  • ಸಂಜೆಯಾಗುತ್ತಲೆ ಮತ್ತೆ ಮತದಾನ ಚುರುಕು
  • ರೊಟ್ಟಿಗವಾಡ ಗ್ರಾಮದ ಮತಗಟ್ಟೆಯಲ್ಲಿ ಸಾಲುಗಟ್ಟಿ ನಿಂತ ಮತದಾರರು
  • ಒಂದೇ ಬಾರಿ ಮತಗಟ್ಟೆಗೆ ಆಗಮಿಸಿದ ನೂರಕ್ಕೂ ಹೆಚ್ಚು ಮತದಾರರು
  • ಸಂಜೆ 5 ಗಂಟೆವರೆಗೆ ಶೇ.72.97 ರಷ್ಟು ಮತದಾನ

2019-05-19 15:43:34

     ಚಿಂಚೋಳಿ ಉಪಚುನಾವಣೆ

  • ಮದ್ಯಾಹ್ನ 3 ಗಂಟೆವರೆಗೆ ಶೇ.53.66 ರಷ್ಟು ಮತದಾನ
  • ಕಳೆದ ಚುನಾವಣೆಗಿಂತ ಉಪಚುನಾವಣೆಯಲ್ಲಿ ಹೆಚ್ಚು ಮತದಾನವಾಗುವ ಸಾಧ್ಯತೆ

2019-05-19 14:06:05

        ಕುಂದಗೋಳ ಉಪಚುನಾವಣೆ

  • ಮಧ್ಯಾಹ್ನ3 ಗಂಟೆಯ ವರೆಗೆ ಶೇ. 60.00 ರಷ್ಟು ಮತದಾನ
  • ಮತ ಚಲಾಯಿಸಿದ 41210 ಪುರುಷರು, 43089 ಮಹಿಳೆಯರು ಹಾಗೂ 01 ಇತರರು
  • ಒಟ್ಟು 84300 ಮತದಾರರಿಂದ ಹಕ್ಕು ಚಲಾವಣೆ

         ಚಿಂಚೋಳಿ ಉಪಚುನಾವಣೆ

  • ಮಧ್ಯಾಹ್ನ 1 ಗಂಟೆಯ ವರೆಗೆ ಶೇ. 40.40 ರಷ್ಟು ಮತದಾನ
  • ಬಿಸಿಲಿನ ತಾಪಮಾನ ಏರಿಕೆಯ ನಂತರ ಮತದಾನಕ್ಕೆ ನೀರಸ ಪ್ರತಿಕ್ರಿಯೆ

2019-05-19 13:04:25

         ಕುಂದಗೋಳ ಉಪಚುನಾವಣೆ 

  • ಯರಗುಪ್ಪಿ ಗ್ರಾಮದಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತ
  • ವಿವಿ ಪ್ಯಾಟ್​ನಲ್ಲಿ ತಾಂತ್ರಿಕ ದೋಷದಿಂದ ಅರ್ಧ ಗಂಟೆ ಕಾಲ ಮತದಾನ ಸ್ಥಗಿತ
  • ಏಕಾಏಕಿ Empty ಎಂದು ತೋರಿಸುತ್ತಿದ್ದ ವಿವಿ ಪ್ಯಾಟ್​

2019-05-19 12:17:16

        ಚಿಂಚೋಳಿ ಉಪ ಚುನಾವಣೆ

  • 11 ಗಂಟೆಯ ವರೆಗೆ ಶೇ. 23.12 ರಷ್ಟು ಮತದಾನ
  • ಕಾಳಗಿ ಪಟ್ಟಣದಲ್ಲಿ 105 ವರ್ಷ ವಯಸ್ಸಿನ ಅಜ್ಜಿಯಿಂದ ಮತ ಚಲಾವಣೆ
  • ಬಿರು ಬಿಸಿಲಿನ ನಡುವೆಯೂ ಮತಗಟ್ಟೆ ಸಂಖ್ಯೆ 215 ರಲ್ಲಿ ಮತ ಚಲಾಯಿಸಿದ ಬಸಮ್ಮ
  • ವೀಲ್​ ಚೇರ್​ನಲ್ಲಿ ಕರೆದುಕೊಂಡು ಹೋಗಿ ಮತದಾನಕ್ಕೆ ಅನುವು ಮಾಡಿಕೊಟ್ಟ ಚುನಾವಣಾ ಸಿಬ್ಬಂದಿ

2019-05-19 11:44:14

        ಚಿಂಚೋಳಿ ಉಪಚುನಾವಣೆ

  • ಕೊಡ್ಲಾ ಗ್ರಾಮದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ
  • ಸ್ಥಳಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್​ ರಾಥೋಡ್​ ಬಂದಾಗ ಬಿಜೆಪಿ ಪರ ಘೋಷಣೆ
  • ಮೋದಿ ಮೋದಿ ಎಂದು ಕೂಗಿದ ಬಿಜೆಪಿ ಕಾರ್ಯಕರ್ತರು
  • ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್​ ಪರ ಜೈಘೋಷ ಹಾಕಿದ ಕೈ ಕಾರ್ಯಕರ್ತರು
  • ಎರಡು ಗುಂಪನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ
  • ಪರಿಸ್ಥಿತಿ ತಿಳಿಗೊಳಿಸಲು ಸ್ಥಳೀಯ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು
  • ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣ

2019-05-19 11:34:20

        ಚಿಂಚೋಳಿ ಉಪಚುನಾವಣೆ

  • ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್​ರಿಂದ ಮತದಾನ
  • ಪತ್ನಿಯೊಂದಿಗೆ ಆಗಮಿಸಿ ಬಡಾ ತಾಂಡದಲ್ಲಿ ಮತ ಚಲಾವಣೆ
  • ಮತಗಟ್ಟೆ ಸಂಖ್ಯೆ 165 ರಲ್ಲಿ ಸರತಿ ಸಾಲಲ್ಲಿ ನಿಂತು ಮತ ಚಲಾವಣೆ
  • ಬಳಿಕ ಈಟಿವಿ  ಭಾರತದೊಂದಿಗೆ ಮಾತನಾಡಿದ ರಾಥೋಡ್
  • ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ
  • ಉಮೇಶ್ ಜಾಧವ್​ಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದ ರಾಥೋಡ್

2019-05-19 11:33:16

ಮತದಾನ ಮಾಡಿದ ಮಾಜಿ ಶಾಸಕ ಎಂ.ಎಸ್.ಅಕ್ಕಿ


         ಕುಂದಗೋಳ ಉಪಚುನಾವಣೆ 

  • ಕುಟುಂಬ ಹಾಗೂ ಬೆಂಬಲಿಗರ ಜೊತೆ ಆಗಮಿಸಿ ಮತದಾನ ಮಾಡಿದ ಮಾಜಿ ಶಾಸಕ ಎಂ.ಎಸ್.ಅಕ್ಕಿ
  • ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಕಿ
  • ದಿವಂಗತ ಸಿ.ಎಸ್.ಶಿವಳ್ಳಿಯವರ ಅಭಿವೃದ್ಧಿ ಕಾರ್ಯಗಳು ಕೈಹಿಡಿಯುತ್ತವೆ
  • ಸಿಎಂ ಕುಮಾರಸ್ವಾಮಿಯವರಿಗೆ ಇರುವ ರೈತಪರ ಕಾಳಜಿ ಕಾಂಗ್ರೆಸ್ ಅಭ್ಯರ್ಥಿಗೆ ಪೂರಕವಾಗಲಿದೆ
  • ಕುಸುಮಾ ಶಿವಳ್ಳಿ ಗೆಲುವು ಪಕ್ಕಾ ಎಂದ ಅಕ್ಕಿ

2019-05-19 10:40:39

ಶಿವಳ್ಳಿಯವರ ಸಮಾಧಿಗೆ ಭೇಟಿ ನೀಡಿ‌ ಪೂಜೆ ಸಲ್ಲಿಸಿದ ಕುಸುಮ ಶಿವಳ್ಳಿ

        ಕುಂದಗೋಳ ಉಪಚುನಾವಣೆ 

  • ಮತದಾನಕ್ಕೂ ಮುನ್ನ ಪತಿ‌ ದಿ‌. ಸಿ ಎಸ್ ಶಿವಳ್ಳಿಯವರ ಸಮಾಧಿಗೆ ಭೇಟಿ ನೀಡಿದ ಕುಸುಮ ಶಿವಳ್ಳಿ
  • ಕುಂದಗೋಳ ವಿಧಾನ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಸುಮ ಶಿವಳ್ಳಿ
  • ಯರಗುಪ್ಪಿಯ ತಮ್ಮ ಜಮೀನಿನಲ್ಲಿರುವ ಶಿವಳ್ಳಿಯವರ ಸಮಾಧಿಗೆ ಭೇಟಿ ನೀಡಿ‌ ಪೂಜೆ ಸಲ್ಲಿಕೆ
  • ಪುತ್ರಿ ರೂಪಾ ಶಿವಳ್ಳಿ, ಪುತ್ರ ಅಮರ ಶಿವ ಜೊತೆ ಸೇರಿ ಪೂಜೆ
  • ಈ ವೇಳೆ ಭಾವುಕರಾದ ಕುಸುಮಾ ಶಿವಳ್ಳಿ

2019-05-19 09:31:30

         ಕುಂದಗೋಳ ಉಪಚುನಾವಣೆ 

  • ಬೆಳಿಗ್ಗೆ 9 ಗಂಟೆಯವರೆಗೆ ಶೇ.9.59 ರಷ್ಟು ಮತದಾನ
  • 18,160 ಜನರಿಂದ ಮತ ಚಲಾವಣೆ
  • ಯರಗುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ  ವೃದ್ಧರಿಂದ ಮತ ಚಲಾವಣೆ
  • ಉತ್ಸಾಹದಿಂದ ತಮ್ಮ ಹಕ್ಕು ಚಲಾವಣೆ ಮಾಡಿದ ವೃದ್ಧರು
  • ವೀಲ್ ಚೇರ್​ನಲ್ಲಿ ಬಂದು ಮತ ಚಾಲಯಿಸಿದ ವೃದ್ಧ ಬಸವೆಣೆಪ್ಪ ಮಾದ್ನೂರ್
  • 80 ವರ್ಷ ವಯಸ್ಸಿನ ಗೌರಮ್ಮ ಹಾಗೂ ಸಿದ್ದಮ್ಮರಿಂದ ಮತಚಲಾವಣೆ 
  • ಮುಂಜಾನೆಯೇ ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿ ಯುವ ಜನತೆಗೆ ಸ್ಪೂರ್ತಿಯಾದ ವೃದ್ಧರು

2019-05-19 09:18:06

ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರರಿಂದ ಮತದಾನ
  • ಕುಂದಗೋಳ ಉಪ‌ಚುನಾವಣೆ ಹಿನ್ನೆಲೆ
  • ಬಿಜೆಪಿ ಅಭ್ಯರ್ಥಿ ಎಸ್ ಐ ಚಿಕ್ಕನಗೌಡರರಿಂದ ಮತದಾನ
  • ಪತ್ನಿ, ಪುತ್ರಿ ನಂದಿತಾ, ಪುತ್ರ ರಮೇಶ ಜೊತೆ ಆಗಮಿಸಿದ ಚಿಕ್ಕನಗೌಡರ 
  • ಅದರಗುಂಚಿಯ ಮತಗಟ್ಟೆ ಸಂಖ್ಯೆ 65 ರಲ್ಲಿ  ಮತದಾನ 
  • ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ
  • ಮತದಾನದ ಬಳಿಕ ಮಾತನಾಡಿದ ಚಿಕ್ಕನಗೌಡರ 
  • 21 ಸಾವಿರ ಮತಗಳ ಅಂತರದಿಂದ ಗೆಲುವು ವಿಶ್ವಾಸವಿದೆ
  • ಕಳೆದ ಚುನಾವಣೆಯಲ್ಲಿ 634 ಮತಗಳ ಅಂತರದಿಂದ ಸೋಲು ಕಂಡಿದ್ದೆ
  • ಈ ಬಾರಿ ಗೆಲುವು ನನ್ನದೇ ಎಂದ ಚಿಕ್ಕನಗೌಡರ 

2019-05-19 09:06:02

ಮತದಾನಕ್ಕೂ ಮುನ್ನ ದೇವರ ದರ್ಶನ ಪಡೆದ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್ ರಾಥೋಡ್
  • ಚಿಂಚೋಳಿ ಉಪ ಚುನಾವಣೆ
  • ಮತದಾನಕ್ಕೂ ಮುನ್ನ ದೇವರ ದರ್ಶನ ಪಡೆದ ಕಾಂಗ್ರೆಸ್​ ಅಭ್ಯರ್ಥಿ ಸುಭಾಷ್ ರಾಥೋಡ್
  • ರಟಕಲ್ ರೇವಣಸಿದ್ದೇಶ್ವರ ದೇವರಿಗೆ ವಿಶೇಷ ಪೂಜೆ
  • ಪತ್ನಿ ಶಾರದಾ ಜೊತೆ ಪೂಜೆ ನೆರವೇರಿಸಿದ ರಾಥೋಡ್
  • ಬಳಿಕ ಮತದಾನ ಮಾಡಲು ಶೇರಿ ಬಡಾ ತಾಂಡಾಕ್ಕೆ ತೆರಳಿದ ರಾಥೋಡ್

2019-05-19 08:59:06

        ಚಿಂಚೋಳಿ ಉಪಚುನಾವಣೆ ಮತದಾನ ಹಿನ್ನೆಲೆ 

  • ಮತದಾನಕ್ಕೂ ಮುನ್ನ ಮನೆದೇವರ ದರ್ಶನ ಪಡೆದ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್
  • ರಟಕಲ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಹಾಗೂ ತಾಯಿಯೊಂದಿಗೆ ಆಗಮಿಸಿದ ಅವಿನಾಶ್
  • ಬಳಿಕ ಬೆಡಸೂರ ತಾಂಡಾದಲ್ಲಿ ಅವಿನಾಶ್​ರಿಂದ ಮತ ಚಲಾಯಿವಣೆ
  • ಅವಿನಾಶ್​ರ ಸ್ವಂತ ಊರು ಚಿಂಚೋಳಿ ತಾಲೂಕಿನ ಬೆಡಸೂರ ತಾಂಡಾ
  • ಐನೋಳ್ಳಿ ಹಾಗೂ ಹುಡದಳ್ಳಿ ಗ್ರಾಮದಲ್ಲಿ ಮತದಾನ ಸ್ಥಗಿತ
  • ಮತಯಂತ್ರ ದೋಷದಿಂದ ಸ್ಥಗಿತಗೊಂಡ ಮತದಾನ
  • ಸ್ಥಳಕ್ಕೆ ಚುನಾವಣೆ ಅಧಿಕಾರಿಗಳು ಭೇಟಿ
  • ಮತಯಂತ್ರ ಬದಲಾವಣೆ ಪ್ರಕ್ರಿಯೆಯಲ್ಲಿ ತೊಡಗಿದ ಅಧಿಕಾರಿಗಳು

2019-05-19 08:00:08

ಮತಗಟ್ಟೆಯ ಬಾಗಿಲಿಗೆ ಅರಿಶಿಣ, ಕುಂಕುಮ ಹಚ್ಚಿ ಪೂಜೆ
  • ಕುಂದಗೋಳ: ಮತಗಟ್ಟೆಗೆ ಪೂಜೆ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರು. 
  • ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಪರವಾಗಿ ಪೂಜೆ
  • ಅದರಗುಂಚಿ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ  ಪೂಜೆ
  • ಪೂಜೆ ಸಲ್ಲಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ
  • ಮತಗಟ್ಟೆ ಸಂಖ್ಯೆ 63, 64, 65ರಲ್ಲಿ ಪೂಜೆ
  • ಚುನಾವಣಾ ಆಯೋಗದ ನಿಯಮದ ಪ್ರಕಾರ ಮತಗಟ್ಟೆಗೆ ಪೂಜೆ ಪುನಸ್ಕಾರ ಮಾಡುವಂತಿಲ್ಲ
  • ಮತಗಟ್ಟೆಯ ಬಾಗಿಲಿಗೆ ಅರಿಶಿಣ, ಕುಂಕುಮ ಹಚ್ಚಿ ಪೂಜೆ
  • ತೋರಣದ ರೀತಿಯಲ್ಲಿ ಹೂವಿನ ಮಾಲೆ ಹಾಕಿದ ಬಿಜೆಪಿ ಬೆಂಬಲಿತರು
  • ಬಳಿಕ ಹೊಸ್ತಲಿನ ಬಳಿ ತೆಂಗಿನಕಾಯಿ ಒಡೆದು ನೀತಿ ಸಂಹಿತೆ ಉಲ್ಲಂಘನೆ
  • ಚಿಂಚೋಳಿ: ಉಪ ಚುನಾವಣೆ ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭ 
  • ಮತ ಯಂತ್ರಗಳ ಸಿದ್ಧತೆ ಮಾಡಿಕೊಂಡ ಅಧಿಕಾರಿಗಳು
  • ಚಿಂಚೋಳಿ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು 241 ಮತಗಟ್ಟೆಗಳ ಸ್ಥಾಪನೆ
  • ಹಕ್ಕು ಚಲಾಯಿಸಲಿದ್ದಾರೆ 1,93,871 ಮತದಾರರು 

2019-05-19 07:38:35

ಉಪಚುನಾವಣೆ: ಚಿಂಚೋಳಿಯಲ್ಲಿ 105 ವರ್ಷದ ವೃದ್ಧೆಯಿಂದ ಮತದಾನ

ಹುಬ್ಬಳ್ಳಿ/ಕಲಬುರಗಿ: ದೇಶದ 8 ರಾಜ್ಯಗಳಲ್ಲಿ ಅಂತಿಮ ಹಂತದ ಮತದಾನ ಇಂದು ನಡೆಯುತ್ತಿದೆ. ಇದೇ ಸಮಯದಲ್ಲಿ ಕರ್ನಾಟಕದ ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯುತ್ತಿದೆ. 

ಮೈತ್ರಿ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಎಂದು ಹೇಳಲಾಗುತ್ತಿರುವ ಈ ಚುನಾವಣೆ ಮೇಲೆ ಕುತೂಹಲ ಹೆಚ್ಚಿದೆ. 

ಕುಂದಗೋಳ, ಚಿಂಚೋಳಿಯಲ್ಲಿ ಒಟ್ಟು 25 ಅಭ್ಯರ್ಥಿಗಳಿದ್ದು, ಕುಂದಗೋಳ ಕ್ಷೇತ್ರದಲ್ಲಿ ಒಟ್ಟು 1,89,437 ಹಾಗೂ ಚಿಂಚೋಳಿಯಲ್ಲಿ 1,93,871 ಮತದಾರರಿದ್ದಾರೆ. 

Last Updated : May 19, 2019, 8:07 PM IST

ABOUT THE AUTHOR

...view details