ಕರ್ನಾಟಕ

karnataka

ETV Bharat / city

ಮುರುಘಾಮಠದ ಇತಿಹಾಸ ಅರಿಯದವರಿಗೆ ಪೀಠಾಧ್ಯಕ್ಷ ಸ್ಥಾನ: ಶಿವಯೋಗಿ ಸ್ವಾಮೀಜಿ ಆಕ್ಷೇಪ

ಕಾಂಗ್ರೆಸ್​ನ ರಾಜಕಾರಣಿ ವಿನಯ್​ ಕುಲಕರ್ಣಿ ಮತ್ತು ಅವರ ಸಹಚರರು ಸೇರಿಕೊಂಡು ಒಳಸಂಚು ಮಾಡಿ, ಧಾರವಾಡದ ಮುರುಘಾಮಠಕ್ಕೆ ಇತಿಹಾಸ ಗೊತ್ತಿಲ್ಲದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಿಸಿದ್ದಾರೆ ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಅಸಮಾಧಾನ ಹೊರಹಾಕಿದ್ದಾರೆ.

ಮುರಾಘಾಮಠಕ್ಕೆ ಕಳ್ಳ,ಸುಳ್ಳ ಸ್ವಾಮೀಜಿಯನ್ನ ನೇಮಕ ಮಾಡಿದ್ದಾರೆ: ಶಿವಯೋಗಿ ಸ್ವಾಮೀಜಿ

By

Published : Oct 23, 2019, 1:54 PM IST

ಹುಬ್ಬಳ್ಳಿ: ಕಾಂಗ್ರೆಸ್​ನ ರಾಜಕಾರಣಿ, ಮಾಜಿ ಸಚಿವ ವಿನಯ್​ ಕುಲಕರ್ಣಿ ಮತ್ತು ಅವರ ಸಹಚರರು ಒಳಸಂಚು ಮಾಡಿ, ಧಾರವಾಡದ ಮುರುಘಾಮಠಕ್ಕೆ ಯಾವುದೇ ಇತಿಹಾಸ ತಿಳಿಯದ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಕ ಮಾಡಿದ್ದಾರೆ ಎಂದು ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.

ಮುರುಘಾಮಠದ ಸ್ವಾಮೀಜಿ ಆಯ್ಕೆಯಲ್ಲಿ ಒಳಸಂಚು: ಶಿವಯೋಗಿ ಸ್ವಾಮೀಜಿ

ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮುರುಘಾಮಠಕ್ಕೆ ಮೋಸದ ಹಾದಿಯಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿಯನ್ನು ನೇಮಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮೀಜಿ ಈ ಹಿಂದೆ, ಗದಗದ ಮುಳುಗುಂದ, ಧಾರವಾಡದ ಪಶುಪತಿಹಾಳ ಮಠಗಳಲ್ಲಿ ಮತ್ತು ಕುಂದಗೋಳದ ಗುಡಗೇರಿಯಲ್ಲಿ ಇದ್ದಾಗ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಾಡಿದ್ದರು. ಅವರಿಗೆ ಭಕ್ತರು ಹಿಡಿಶಾಪ ಹಾಕಿದ್ದಾರೆ. ಆದ್ರೆ ಅಂತವರನ್ನೇ ಮಠಾಧೀಶರನ್ನಾಗಿ ಮಾಡಿರುವುದು ವಿಪರ್ಯಾಸ ಎಂದು ಆತಂಕ ವ್ಯಕ್ತಪಡಿಸಿದರು.

ಇದರಿಂದ ತಮ್ಮ ಸ್ವಾರ್ಥಕ್ಕಾಗಿ ವಿನಯ್​ ಕುಲಕರ್ಣಿ ಅವರ ಸಹಚರರು ಏನೂ ಬೇಕಾದರೂ ಮಾಡಬಹುದು ಎಂದು ಮತ್ತೊಮ್ಮೆ ಸಾಬೀತಾಗಿದೆ. ಕೂಡಲೇ ಇಂತಹ ಸ್ವಾಮೀಜಿಯನ್ನು ಮುರುಘಾಮಠದಿಂದ ಹೊರಕ್ಕೆ ಹಾಕಬೇಕು ಹಾಗೂ ಮುರುಘಾಮಠವು ನನಗೆ ಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸುತ್ತೇನೆ. ಅಲ್ಲದೇ ಶೀಘ್ರದಲ್ಲೇ ಮುರುಘಾಮಠದಲ್ಲೇ ಜೀವಂತ ಸಮಾಧಿ ತೆಗೆದುಕೊಳ್ಳಲು ನಿರ್ಧಾರ ಮಾಡುತ್ತೇನೆ. ನನಗೆ ಹಲವು ರಾಜಕೀಯ ವ್ಯಕ್ತಿಗಳಿಂದ ಜೀವ ಬೆದರಿಕೆ ಬರುತ್ತಿದೆ ಎಂದು ಶಿವಯೋಗಿ ಸ್ವಾಮೀಜಿ ಆರೋಪಿಸಿದರು.

ABOUT THE AUTHOR

...view details