ಕರ್ನಾಟಕ

karnataka

ETV Bharat / city

ಗಾಂಧಿ ಜಯಂತಿಯಂದು ಮದ್ಯ ಮಾರಾಟ ಮಾಡಲು ಹೋಗಿ ಸಿಕ್ಕ ಬಿದ್ದ ಆರೋಪಿ..

ಗಾಂಧಿ ಜಯಂತಿ ಪ್ರಯಕ್ತ ಇಂದು ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಈ ನಡುವೆಯೂ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದ್ಯ ಮಾರಾಟ

By

Published : Oct 2, 2019, 11:22 PM IST

ಹುಬ್ಬಳ್ಳಿ: ಗಾಂಧಿ ಜಯಂತಿ ಪ್ರಯಕ್ತ ಇಂದು ಮಧ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದ್ದು, ಈ ನಡುವೆಯೂ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ನಾಗಶೆಟ್ಟಿ ಕೊಪ್ಪದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡಲು ಪ್ರತ್ನಿಸುತ್ತಿದ್ದ ದೀಪಕ್ ವಿನಾಯಕ ಪುಕಲೆ (59) ಅಬಕಾರಿ ಸಬ್ ಇನ್ಸ್​ಪೆಕ್ಟರ್ ರಾಜೇಂದ್ರ ಮುರಾಳ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ. ಆರೋಪಿಯಿಂದ 12.96 ಲೀಟರ್ ಭಾರತೀಯ ಮದ್ಯ ವಶಪಡಿಸಿಕೊಂಡು, ಸಾಗಾಣಿಕೆಗೆ ಬಳಸಿದ ಹೊಂಡಾ ಆ್ಯಕ್ಟೀವ್ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹುಬ್ಬಳ್ಳಿ ಸಬ್ ಜೈಲ್​ಗೆ ರವಾನಿಸಲಾಗಿದೆ.

ಇನ್ನು, ದಾಳಿ ವೇಳೆ ಪ್ರೊಬೆಷನರಿ ಅಬಕಾರಿ ಸಬ್ ಇನ್ಸ್​ಪೆಕ್ಟರ್​ಗಳಾದ ವಿನಾಯಕ ಗಿರಡ್ಡಿ, ಮಂಜುನಾಥ, ಅಬಕಾರಿ ರಕ್ಷಕರಾದ ಶೀಲಭದ್ರ, ಎಸ್ ಬಿ ಕಾಳೆ, ಹೆಚ್ ಎಂ ಚೌಧರಿ ಉಪಸ್ಥಿತರಿದ್ದರು.

ABOUT THE AUTHOR

...view details