ಹುಬ್ಬಳ್ಳಿ: ಮನೆಯವರ ಜೊತೆ ಜಗಳವಾಡಿದ ವ್ಯಕ್ತಿಯೊಬ್ಬ ಮನೆಯಿಂದ ಎಲ್ಲರನ್ನು ಹೊರಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಬೇಪಾರಿ ಪ್ಲಾಟ್ನ ನಲತಲಿಯಲ್ಲಿ ನಡೆದಿದೆ.
ಅಮೀರ್ ಮಹಮದಾಲಿ ಮನಿಯಾರ್ (28) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅಮೀರ್ ನಿನ್ನೆ ರಾತ್ರಿ ಪತ್ನಿಯೊಂದಿಗೆ ಸಾಲದ ವಿಚಾರವಾಗಿ ಜಗಳವಾಡಿದ್ದಾನೆ. ತಡರಾತ್ರಿ ಮಡದಿ, ಮಕ್ಕಳನ್ನು ಮನೆಯಿಂದ ಹೊರ ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.