ಹುಬ್ಬಳ್ಳಿ:ನಾಲ್ಕು ದಿನದ ಹಿಂದೆ ಕಿಡ್ನಾಪ್ 5 ವರ್ಷದ ಬಾಲಕಿ ಕಿಡ್ನಾಪ್ ಆಗಿದ್ದಾಳೆ ಎಂಬ ದೂರು ದಾಖಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪಕ್ಕದ ಮನೆಯಲ್ಲಿಯೇ ಬಾಲಕಿಯ ಶವ ಪತ್ತೆಯಾಗಿದೆ.
ಕಾಣೆಯಾಗಿದ್ದ ಬಾಲಕಿ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಶವವಾಗಿ ಪತ್ತೆ! - ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ
ನಾಲ್ಕು ದಿನದ ಹಿಂದೆಯಷ್ಟೇ ಕಾಣೆಯಾಗಿದ್ದ ಬಾಲಕಿಯ ಶವ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿದ್ದು, ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿದ್ದ ಬಾಲಕಿ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಶವವಾಗಿ ಪತ್ತೆ!
ನಾಲ್ಕು ದಿನದ ಹಿಂದೆಯಷ್ಟೇ ಹಳೇ ಹುಬ್ಬಳ್ಳಿಯ ಭಾರತೀ ನಗರದ ಹನುಮಂತಪ್ಪ ಗಾಳಪ್ಪನವರ್ ಎಂಬುವವರ ಪುತ್ರಿ 5 ವರ್ಷದ ಶ್ರೇಯಾ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಲಾಗಿತ್ತು. ಇದೀಗ ಪಕ್ಕದ ಮನೆಯ ನೀರಿನ ಟ್ಯಾಂಕ್ನಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹನುಮಂತಪ್ಪ ಬಾಡಿಗೆಗೆ ಕೊಟ್ಟಿದ್ದ ಮನೆಯಲ್ಲಿ ಅವರ ಮಗಳ ಶವ ಪತ್ತೆಯಾಗಿದ್ದು, ಬಾಡಿಗೆ ಮನೆಯಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.