ದಾವಣಗೆರೆ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಇಂದು ಲಾಕ್‌ಡೌನ್ ಜಾರಿಯಾಗಿದೆ. ಆದರೆ ಮಟನ್ ಸ್ಟಾಲ್ಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ.
ಸಂಡೇ ಲಾಕ್‌ಡೌನ್: ಮಾಂಸ ಖರೀದಿಗೆ ಬರದ ಗ್ರಾಹಕರು
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಇಂದು ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದ್ರೆ ಮಾಂಸದಂಗಡಿಗಳು ಎಂದಿನಂತೆ ತೆರೆದಿದ್ದರೂ ಸಹ ಗ್ರಾಹಕರು ಸ್ಟಾಲ್ಗಳತ್ತ ಮುಖಮಾಡಿಲ್ಲ.
Davanagere
ರಾಮು ಮಟನ್ ಸ್ಟಾಲ್, ಆಂಜನೇಯ ಮಟನ್ ಸ್ಟಾಲ್ ಸೇರಿದಂತೆ ನಗರದ ಪ್ರಮುಖ ಮಾಂಸದಂಗಡಿಗಳು ಓಪನ್ ಆಗಿದ್ದವು. ಆದ್ರೆ ಸಂಡೇ ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬಾರದ ಕಾರಣ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಯಿತು.
ಪ್ರತಿ ಭಾನುವಾರ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಭಾನುವಾರ ಲಾಕ್‌ಡೌನ್ ಗೆ ಸರ್ಕಾರ ನಿರ್ಧರಿಸಿರುವುದರಿಂದ ಜನರು ಇತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಮಟನ್ ಸ್ಟಾಲ್ ಮತ್ತು ಮೀನು ವ್ಯಾಪಾರ ನಡೆಸುವ ಮಾಲೀಕರು ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.