ಕರ್ನಾಟಕ

karnataka

ETV Bharat / city

ಸಿರಿಗೆರೆ ಬೃಹನ್ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದಿದೆ : ಶಾಮನೂರು ಶಿವಶಂಕರಪ್ಪ - ಸಿರಿಗೆರೆ ಬೃಹನ್ಮಠ

ಸ್ವಾಮೀಗಳಿಗೆ 75 ವರ್ಷ ಆದ ಕಾರಣ ಮಠಕ್ಕೆ ಮರಿ ಸ್ವಾಮಿ ನೇಮಕ ಮಾಡಲು ಸಮಾಜದ ಹಿರಿಯರು, ಗಣ್ಯರೆಲ್ಲ ಸೇರಿ ಸಭೆ ಮಾಡಿದ್ದೇವೆ. ಮರಿ ಸ್ವಾಮಿಗಳ ಆಯ್ಕೆ ಕುರಿತು ಸ್ವಾಮಿಗಳು ನಾವು ಸೇರಿ ಚರ್ಚೆ ಮಾಡುತ್ತೇವೆ. ಯಾವಾಗ ಸಭೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿಸಿದರು..

Davanagere
ಶಿವಕುಮಾರ ಶಿವಾಚಾರ್ಯ ಶ್ರೀ, ಪಂಡಿತರಾಧ್ಯ ಶಿವಚಾರ್ಯ ಹಾಗೂ ಶಾಮನೂರು ಶಿವಶಂಕರಪ್ಪ

By

Published : May 14, 2022, 11:51 AM IST

ದಾವಣಗೆರೆ :ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಸಿರಿಗೆರೆ ಮಠದ ಇಬ್ಬರು ಸ್ವಾಮೀಜಿಗಳಾದ ಶಿವಕುಮಾರ ಶಿವಾಚಾರ್ಯ ಶ್ರೀ ಹಾಗೂ ಪಂಡಿತರಾಧ್ಯ ಶಿವಚಾರ್ಯ ಶ್ರೀ ಅವರೊಂದಿಗೆ ಮತ್ತೊಂದು ಸಭೆ ನಡೆಸಬೇಕಾಗಿದೆ ಎಂದು ಹಿರಿಯ ಶಾಸಕ ಹಾಗೂ ಅಖಿಲ ಭಾರತ‌ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.

ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ವಿಚಾರ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿರಿಗೆರೆ ಬೃಹನ್ಮಠದ ಉತ್ತಾರಾಧಿಕಾರಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ವಿಸ್ತೃತವಾದ ಚರ್ಚೆಯಾಗಿದೆ. ಸ್ವಾಮೀಜಿಗಳಿಗೆ 60 ವರ್ಷವಾದ ನಂತರ ಮರಿ ಸ್ವಾಮಿಗಳನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ, ಅದು ಆಗಲಿಲ್ಲ. ಇಬ್ಬರು ಸ್ವಾಮೀಜಿಗಳಿಗೆ 75 ವರ್ಷವಾಗಿದೆ. ಆದ್ದರಿಂದ ಮರಿ ಸ್ವಾಮಿ ಆಯ್ಕೆ ಮಾಡಬೇಕೆಂಬ ಸಂಕಲ್ಪ ಇಡೀ ಸಮಾಜ ಹಾಗೂ ಭಕ್ತರು ಹೊಂದಿದ್ದೇವೆ ಎಂದರು.

ಸ್ವಾಮೀಗಳಿಗೆ 75 ವರ್ಷ ಆದ ಕಾರಣ ಮಠಕ್ಕೆ ಮರಿ ಸ್ವಾಮಿ ನೇಮಕ ಮಾಡಲು ಸಮಾಜದ ಹಿರಿಯರು, ಗಣ್ಯರೆಲ್ಲ ಸೇರಿ ಸಭೆ ಮಾಡಿದ್ದೇವೆ. ಮರಿ ಸ್ವಾಮಿಗಳ ಆಯ್ಕೆ ಕುರಿತು ಸ್ವಾಮಿಗಳು ನಾವು ಸೇರಿ ಚರ್ಚೆ ಮಾಡುತ್ತೇವೆ. ಯಾವಾಗ ಸಭೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details