ಕರ್ನಾಟಕ

karnataka

ETV Bharat / city

ಸಾವರ್ಕರ್​​ ಬಿಡುಗಡೆಗಾಗಿ ಬ್ರಿಟಿಷರಿಗೆ ಪತ್ರ ಬರೆದು ಭಿಕ್ಷೆ ಬೇಡಿದ್ದರು: ಶಾಸಕ ಯು ಟಿ ಖಾದರ್

ವೀರ ಸಾವರ್ಕರ್​​ ಜೊತೆ ಬೇರೆಯವರು ಕೂಡ ಅಂಡಮಾನ್ ಜೈಲಿನಲ್ಲಿದ್ದರು. ಅವರು ಬ್ರಿಟಿಷರ ಗುಂಡಿಗೆ ಬಲಿಯಾದರು. ಇಂತವರು ಹುತಾತ್ಮರಾ? ಅಥವಾ ಬಿಡುಗಡೆಗೆ ಭಿಕ್ಷೆ ಬೇಡಿದವರು ಹುತಾತ್ಮರಾ? ಎಂದು ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ.

MLA U T Khadar speak about savarkar
ಯು ಟಿ ಖಾದರ್

By

Published : Aug 21, 2022, 6:56 PM IST

ದಾವಣಗೆರೆ: ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾವರ್ಕರ್​​ ಅಂಡಮಾನ್ ಜೈಲಿಗೆ ಹೋಗಿರುವುದು ನಿಜ. ಆದ್ರೆ ಅವರು ತಮ್ಮ ಬಿಡುಗಡೆಗೆ ಬ್ರಿಟಿಷ್​​ ಸರ್ಕಾರಕ್ಕೆ 10 ಬಾರಿ ಪತ್ರ ಬರೆದಿದ್ದಾರೆ. ಬಿಡುಗಡೆಗಾಗಿ ಬ್ರಿಟಿಷರ ಬಳಿ ಪತ್ರ ಬರೆದು ಭಿಕ್ಷೆ ಬೇಡಿದ್ದರು. ಅವರ ಜೊತೆ ಬೇರೆಯವರು ಕೂಡ ಅಂಡಮಾನ್ ಜೈಲಿನಲ್ಲಿದ್ದರು. ಅವರು ಬ್ರಿಟಿಷರ ಗುಂಡಿಗೆ ಬಲಿಯಾದರು. ಅವರು ಹುತಾತ್ಮರಾ? ಅಥವಾ ಬಿಡುಗಡೆಗೆ ಭಿಕ್ಷೆ ಬೇಡಿದವರು ಹುತಾತ್ಮರಾ? ಎಂದು ಶಾಸಕ ಯು ಟಿ ಖಾದರ್ ಪ್ರಶ್ನಿಸಿದ್ದಾರೆ.

ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಫ್ಲೆಕ್ಸ್ ಯಾರು ಹರಿದು ಹಾಕಿದ್ರೂ ಅದು ತಪ್ಪು. ಆ ರೀತಿ ಫ್ಲೆಕ್ಸ್​​ ಹರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಶಾಸಕ ಯು ಟಿ ಖಾದರ್ ವಾಗ್ದಾಳಿ

ಸಿದ್ದರಾಮಯ್ಯ ಕೊಡಗು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವಂತೆ ಕರೆ ಕೊಟ್ಟ ಬಗ್ಗೆ ಮಾತನಾಡಿ, ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡೋದು ಸಹಜ. ಸರ್ಕಾರ ಪೊಲೀಸ್ ಇಲಾಖೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಅದನ್ನು ಬಿಡುಗಡೆಗೊಳಿಸಲು ಹೋರಾಟ ಮಾಡುತ್ತಿದ್ದೇವೆ. ಕೊಡಗಿನ ಜನ ಭಯ ಪಡುವ ಅಗತ್ಯವಿಲ್ಲ ಎಂದರು.

ಇದನ್ನೂ ಓದಿ:ಸಾವರ್ಕರ್ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ ಇರುವುದು ಸೈದ್ದಾಂತಿಕ ಭಿನ್ನಾಭಿಪ್ರಾಯ: ಖಾದರ್

ABOUT THE AUTHOR

...view details