ದಾವಣಗೆರೆ : ಬಸವ ಜಯಂತಿ ಹಿನ್ನೆಲೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಕೋವಿಡ್ ಸೋಂಕಿತರಿಗೆ ಹೋಳಿಗೆ ಮಾಡಿ ಉಣಬಡಿಸಿದರು.
ಒಳ್ಳೇ ಸುದ್ದಿ, ಇದು ಒಳ್ಳೇದು ಕಣ್ರೀ.. ಬಸವ ಜಯಂತಿ ಹಿನ್ನೆಲೆ ಸೋಂಕಿತರಿಗಾಗಿ ಹೋಳಿಗೆ ಮಾಡಿ ಉಣಬಡಿಸಿದ ರೇಣುಕಾಚಾರ್ಯ.. - ಅಡುಗೆ ಮಾಡಿದ ರೇಣುಕಾಚಾರ್ಯ
ಕೊರೊನಾ ಸೋಂಕಿತರೊಂದಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರಿಗೂ ಹಬ್ಬದೂಟವನ್ನು ಉಣಬಡಿಸಲಾಯಿತು. ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿ ಬಸವ ಜಯಂತಿಯ ಶುಭಾಶಯ ಕೋರಿದರು..
ಶಾಸಕ ರೇಣುಕಾಚಾರ್ಯ
ಹಬ್ಬದ ಸಂಭ್ರಮದಲ್ಲಿ ಒಂಟಿತನದ ಕೊರಗು ಸೋಂಕಿತರಿಗೆ ಬರಬಾರದು ಎಂಬ ಉದ್ದೇಶದಿಂದ ಕೋವಿಡ್ ರೋಗಿಗಳಿಗಾಗಿ ಎಂಪಿ ರೇಣುಕಾಚಾರ್ಯರವರು ಊಟದ ವ್ಯವಸ್ಥೆ ಮಾಡಿಸಿದ್ದರು. ಅಲ್ಲದೆ ತಾವೇ ಪಿಪಿಇ ಕಿಟ್ ಧರಿಸಿ ಆಹಾರ ಬಡಿಸಿದರು.
ಕೊರೊನಾ ಸೋಂಕಿತರೊಂದಿಗೆ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರಿಗೂ ಹಬ್ಬದೂಟವನ್ನು ಉಣಬಡಿಸಲಾಯಿತು. ಹೊನ್ನಾಳಿ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ಹೋಳಿಗೆ ವಿತರಣೆ ಮಾಡಿ ಬಸವ ಜಯಂತಿಯ ಶುಭಾಶಯ ಕೋರಿದರು.