ದಾವಣಗೆರೆ: ನಾಥೂರಾಮ್ ಗೋಡ್ಸೆ ಸಂತತಿಯವರು ಜೈ ಶ್ರೀರಾಮ್ ಅಂತಾರೆ, ಸಂವಿಧಾನವನ್ನು ಗೌರವಿಸುವವರು ಹೇ ರಾಮ್ ಎನ್ನುತ್ತಾರೆ, ಜೈ ಶ್ರೀರಾಮ್ ಎನ್ನುವರು ಎಷ್ಟು ಜನ ರಾಮಾಯಣ ಓದಿದ್ದಾರೆ ಹೇಳಿ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಎರಡು ಗುಂಪುಗಳನ್ನು ಕಾಣಬಹುದು. ಒಂದು ಜೈ ಶ್ರೀರಾಮ್ ಎನ್ನುವರು ಮತ್ತೊಂದು ಹೇ ರಾಮ್ ಎನ್ನುವರು. ವಾಲ್ಮೀಕಿ ರಾಮಾಯಣವನ್ನು ಜೈ ಶ್ರೀರಾಮ್ ಎನ್ನುವರು ನಂಬುವುದಿಲ್ಲ, ತುಳಸಿದಾಸ್ ರಚಿತ ರಾಮಾಯಣವನ್ನು ಮಾತ್ರ ಅವರು ನಂಬುತ್ತಾರೆ. ವಾಲ್ಮೀಕಿ ಪರಿಶಿಷ್ಟ ಪಂಗಡ, ಜಾತಿಯ ವ್ಯಕ್ತಿಯಾದ್ದರಿಂದ ನಂಬುವುದಿಲ್ಲ. ರಾಮ, ಸೀತೆ, ಲಕ್ಷ್ಮಣ, ಭರತ, ಶತ್ರುಘ್ನ ಕೂಡ ನಾನ್ ವೆಜಿಟೇರಿಯನ್ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು.