ಕರ್ನಾಟಕ

karnataka

ETV Bharat / city

ರಾತ್ರಿ ಸುರಿದ ಭಾರಿ ಮಳೆ: ದ್ವೀಪದಂತಾದ ಹೊನ್ನಾಳಿಯ ಗ್ರಾಮಗಳು - ಶಾಸಕ ರೇಣುಕಾಚಾರ್ಯ

ಭಾರಿ ಮಳೆಯಿಂದಾಗಿ ಹೊನ್ನಾಳಿ ನ್ಯಾಮತಿ ಸಂಪರ್ಕ ರಸ್ತೆ ಕೊಚ್ಚಿಹೋಗಿದ್ದು, ಶಾಸಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಕಾರ್ಯಪ್ರವೃತ್ತರಾಗಿವಂತೆ ಸೂಚಿಸಿದ್ದಾರೆ.

MLA MP Renukacharya visits rain damaged areas
ಮಳೆ ಹಾನಿ ಪೀಡಿತ ಸ್ಥಳಗಳಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಭೇಟಿ

By

Published : Aug 2, 2022, 12:53 PM IST

Updated : Aug 2, 2022, 1:48 PM IST

ದಾವಣಗೆರೆ :ರಾತ್ರಿ ಸುರಿದ ಭಾರಿ ಮಳೆ, ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕಿನ ಕೆಲ ಗ್ರಾಮಗಳು ದ್ವೀಪದಂತಾಗಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಅಪಾರ ಪ್ರಮಾಣದ ಹಾನಿಯಾಗಿದೆ. ಮಳೆ ಹಾನಿ ಪೀಡಿತ ಸ್ಥಳಗಳಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಳೆಯಿಂದಾಗಿ ಕೆರೆ ಕಟ್ಟೆಗಳು‌ ಮೈದುಂಬಿ ಹರಿಯುತ್ತಿದ್ದು, ಹೊನ್ನಾಳಿಯ ಹಿರೇಕಲ್ಮಠ ಕೆರೆ ಬರ್ತಿಯಾಗಿದೆ. ಕೆರೆಗೆ ಮೀನು ಬಿಟ್ಟು ಸಾಕಣೆ ಮಾಡುತ್ತಿದ್ದ ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿದೆ.

ಕೊಚ್ಚಿ ಹೋದ ರಸ್ತೆ ಹಾಗೂ ಸೇತುವೆ:ಭಾರಿ ಮಳೆಯಿಂದಾಗಿ ಹೊನ್ನಾಳಿ ನ್ಯಾಮತಿ ಸಂಪರ್ಕ ರಸ್ತೆ ಕೊಚ್ಚಿಹೋಗಿರುವ ಘಟನೆ ನ್ಯಾಮತಿ ತಾಲೂಕಿನ ದಾನಿಹಳ್ಳಿ ಬಳಿ ಘಟನೆ ನಡೆದಿದೆ.‌ ಘಟನಾ ಸ್ಥಳಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿವಂತೆ ಸೂಚಿಸಿದ್ದಾರೆ.

ಮಳೆ ಹಾನಿ ಪೀಡಿತ ಸ್ಥಳಗಳಿಗೆ ಶಾಸಕ ಎಂ.ಪಿ ರೇಣುಕಾಚಾರ್ಯ ಭೇಟಿ

ರಸ್ತೆ ಸಂಪರ್ಕ ಕಡಿತವಾದ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗದಲ್ಲಿ ಓಡಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಕೊಚ್ಚಿಹೋಗಿದೆ. ಬೆಳೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಇದನ್ನೂ ಓದಿ :ವಿಜಯನಗರದಲ್ಲಿ ಭಾರಿ ಮಳೆ: 30ಕ್ಕೂ ಅಧಿಕ‌ ಮನೆಗಳು ಜಲಾವೃತ, ಶಾಲೆಗಳಿಗೆ ರಜೆ

Last Updated : Aug 2, 2022, 1:48 PM IST

ABOUT THE AUTHOR

...view details