ದಾವಣಗೆರೆ:ಹೆದ್ದಾರಿಗಳಲ್ಲಿ ಆಳವಾದ ಗುಂಡಿ ಹಾಗೂ ಕಂದಕಕ್ಕೆ ವಾಹನಗಳು ಉರುಳದಂತೆ ತಡೆಗೋಡೆ ನಿರ್ಮಿಸುವುದು ನಿಯಮ. ಆದರೆ, ಬೆಣ್ಣೆ ನಗರಿಯ ಹಲವು ರಸ್ತೆಗಳಿಗೆ ತಡೆಗೋಡೆಗಳನ್ನೇ ನಿರ್ಮಿಸಿಲ್ಲ. ಇದರಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
'ತಡೆಗೋಡೆ ನಿರ್ಮಿಸಿ, ಅಪಾಯ ತಪ್ಪಿಸಿ'...ಬೆಣ್ಣೆ ನಗರಿ ಜನರ ಅಳಲು ನಗರದ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನದ ಹಿಂದೆ ಕಾರೊಂದು ತಡೆಗೋಡೆ ಇಲ್ಲದ ಪರಿಣಾಮ ಕಂದಕಕ್ಕೆ ಉರುಳಿ ಬಿದ್ದಿದ್ದು, ಹಲವರು ಸಾವನ್ನಪ್ಪಿದ್ದರು. ಜಿಲ್ಲೆಯ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೊಡ್ಡ-ದೊಡ್ಡ ಕಂದಕಗಳಿದ್ದು, ಈ ರಸ್ತೆಗಳಿಗೆ ತಡೆಗೋಡೆ ಇಲ್ಲವಾಗಿರುವುದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕೆಲವು ಕಡೆ ಹೆಸರಿಗೆ ಮಾತ್ರ ತಡೆಗೋಡೆ ನಿರ್ಮಿಸಿದ್ದು, ಮುಟ್ಟಿದರೆ ಸಾಕು ಬೀಳುವ ಸ್ಥಿತಿಯಲ್ಲಿವೆ. ಇನ್ನೂ ಕೆಲವೆಡೆ ತಡೆಗೋಡೆಗಳನ್ನು ನಿರ್ಮಾಣ ಮಾಡಲು ಗುಂಡಿಗಳನ್ನು ತೆಗೆದು ಹಾಗೇ ಬಿಟ್ಟಿದ್ದಾರೆ.
ಓದಿ:ಶೇ.85 ರಷ್ಟು ಯೋಜನೆಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ: ಸಿಎಂ ಉತ್ತರಕ್ಕೆ ತೃಪ್ತರಾಗದ ಕಾಂಗ್ರೆಸ್ ಸದಸ್ಯರ ಸಭಾತ್ಯಾಗ
ದಾವಣಗೆರೆಯ ಅಪಘಾತ ವಲಯಗಳಾದ ಲೋಕಿಕೆರೆ ರಸ್ತೆ, ಜಿಲ್ಲಾ ಪಂಚಾಯತ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ, ಹದಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸುರಂಗ ಮಾರ್ಗದ ಮೇಲಿಂದ ಹಾದು ಹೋಗಿರುವ ಹೆದ್ದಾರಿ, ಟಿವಿ ಸ್ಟೇಷನ್ ಕೆರೆ ಏರಿ ಬಳಿ ಯಾವುದೇ ತಡೆಗೋಡೆಗಳಿಲ್ಲ. ಹೀಗಾಗಿ, ಹೆದ್ದಾರಿ ಪ್ರಾಧಿಕಾರ ಈ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸುವ ಮೂಲಕ ಜನರ ಜೀವ ಉಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.