ಕರ್ನಾಟಕ

karnataka

ETV Bharat / city

ಸರ್ವೇಕ್ಷಣಾ ಸಿಬ್ಬಂದಿಗೆ ಜನರ ಅಸಹಕಾರ: ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಸಿ ಮನವಿ

ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದಾಗ ಅವರ ಕುಟುಂಬದವವರು, ನೆರೆಹೊರೆಯವರು ಹಾಗೂ ಶೀತ, ಕೆಮ್ಮು, ಜ್ವರ ಯಾವುದಾದರೂ ದೀರ್ಘ ಕಾಲದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದ್ದಾರೆ.

Corona Test does Davangere DC appeal
ಸರ್ವೇಕ್ಷಣಾ ಸಿಬ್ಬಂದಿಗೆ ಜನರ ಅಸಹಕಾರ, ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಸಿ ಮನವಿ

By

Published : Aug 14, 2020, 10:18 AM IST

Updated : Aug 14, 2020, 11:43 AM IST

ದಾವಣಗೆರೆ: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿದ ವೇಳೆ ಜನರು ತಪಾಸಣೆಗೆ ಸಹಕರಿಸದೆ ಮನೆ ಬಾಗಿಲು ಹಾಕಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಸರ್ವೇಕ್ಷಣಾ ಸಿಬ್ಬಂದಿಗೆ ಜನರ ಅಸಹಕಾರ: ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಿಸಿ ಮನವಿ

ಸಾರ್ವಜನಿಕರು ಕೋವಿಡ್ ರೋಗ ಲಕ್ಷಣಗಳು ಇದ್ದಾಗ್ಯೂ ಸಹ ಸರ್ಕಾರದ ನಿಯಮವಳಿಗಳ ಪ್ರಕಾರ ತಪಾಸಣೆಗೆ ಒಳಪಡಿಸಿಕೊಳ್ಳದೆ ಮನೆಯಲ್ಲೇ ಇದ್ದು, ರೋಗ ಲಕ್ಷಣಗಳು ಉಲ್ಬಣವಾದ ಸಮಯದಲ್ಲಿ ಆಸ್ವತ್ರೆಗಳಿಗೆ ಬರುತ್ತಿರುವುದು ಕಂಡು ಬಂದಿದೆ. ಜಿಲ್ಲಾಡಳಿತ ಭವನದಲ್ಲಿ ನಡೆದ ಕೋವಿಡ್ ನಿರ್ವಹಣಾ ತಜ್ಞರ ಸಮಿತಿ ಸಭೆಯಲ್ಲಿ ಈ ವಿಚಾರ ಗೊತ್ತಾಗಿದೆ.

ಸಹಕರಿಸಲು ಡಿಸಿ ಮನವಿ:

ಕೊನೆಯ ಹಂತದಲ್ಲಿ ರೋಗಿಗಳು ಬಂದರೆ ಬದುಕಿಸುವುದು ವೈದ್ಯರಿಗೆ ಕಷ್ಟ. ಸಾರ್ವಜನಿಕರು ಕೋವಿಡ್ ನಿಯಂತ್ರಿಸುವ ಸಲುವಾಗಿ ತಮ್ಮ ವಾರ್ಡ್ ಮತ್ತು ಗ್ರಾಮಗಳ ಮನೆ ಬಾಗಿಲಿಗೆ ಜಿಲ್ಲಾ ಸರ್ವೇಕ್ಷಣಾ ಸಿಬ್ಬಂದಿ ಬಂದಾಗ ಸೋಂಕಿತರ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಕ್ಕೆ ಬಂದವರು. ಕೋವಿಡ್ ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದಾಗ ಅವರ ಕುಟುಂಬದವವರು, ನೆರೆಹೊರೆಯವರು ಹಾಗೂ ಶೀತ, ಕೆಮ್ಮು, ಜ್ವರ ಯಾವುದಾದರೂ ದೀರ್ಘ ಕಾಲದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಕೂಡಲೇ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮನವಿ ಮಾಡಿದ್ದಾರೆ.

ಸೋಂಕು ಆದಷ್ಟು ಬೇಗನೆ ಪತ್ತೆಯಾದರೆ ಅಗತ್ಯ ಚಿಕಿತ್ಸೆ ನೀಡಿ ಸಂಭವಿಸಬಹುದಾದ ಸಾವು ತಪ್ಪಿಸಬಹುದಾಗಿದೆ.‌ ಜಿಲ್ಲೆಯಲ್ಲಿ 114 ಮಂದಿ ಇದುವರೆಗೆ ಕೊರೊನಾಗೆ ಬಲಿಯಾಗಿದ್ದಾರೆ. ವೈದ್ಯರು ಗಂಭೀರವಾದ ಸಮಯದಲ್ಲಿ ಬಂದಾಗ ಎಷ್ಟೇ ಪ್ರಯತ್ನ ಮಾಡಿದರೂ ಕಾಪಾಡಲು ಆಗದು ಎಂದು ಹೇಳಿದ್ದಾರೆ.

Last Updated : Aug 14, 2020, 11:43 AM IST

ABOUT THE AUTHOR

...view details