ಕರ್ನಾಟಕ

karnataka

ETV Bharat / city

ಮಣ್ಣಿನಿಂದ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ ನಡೆಗೆ ಜನ ಮೆಚ್ಚುಗೆ

constable: ದಾವಣಗೆರೆಯ ಸಂಚಾರಿ ಠಾಣೆಯ ಕಾನ್ಸ್​ಟೇಬಲ್ ಹೇಮಣ್ಣ ಅವರು ರಸ್ತೆಯಲ್ಲಿನ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

constable covered with potholes in the road in Davanagere
ಮಣ್ಣಿನಿಂದ ರಸ್ತೆ ಗುಂಡಿ ಮುಚ್ಚಿದ ಪೊಲೀಸ್ ಸಿಬ್ಬಂದಿ ನಡೆಗೆ ಜನ ಮೆಚ್ಚುಗೆ

By

Published : Nov 25, 2021, 1:30 PM IST

ದಾವಣಗೆರೆ: ಪೊಲೀಸರು ರಕ್ಷಕರಲ್ಲ ಭಕ್ಷಕರು ಎಂದು ಹೇಳುವುದು ಸಾಮಾನ್ಯ. ಆದರೆ, ಅದೇ ಇಲಾಖೆಯ ಕೆಲ ಪೊಲೀಸರು ಜನಸಾಮಾನ್ಯರು ಸಂಚರಿಸುವಾಗ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಸ್ತೆ ಗುಂಡಿಗೆ ಮಣ್ಣು ಹಾಕಿ ಗುಂಡಿ ಮುಚ್ಚುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

constable covered potholes: ದಾವಣಗೆರೆಯ ಸಂಚಾರಿ ಠಾಣೆ ಕಾನ್ಸ್​​ಟೇಬಲ್ ಹೇಮಣ್ಣ ಅವರು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಿದ್ದಾರೆ. ನಗರದ ಸರ್ಕಲ್‌ನಲ್ಲಿ ಬಾಯಿಬಿಟ್ಟಿದ್ದ ದೊಡ್ಡ ಗುಂಡಿಗಳನ್ನು ಹೇಮಣ್ಣ ಮುಚ್ಚುತ್ತಿದ್ದಾರೆ.

ಮಳೆಯಿಂದ ಗುಂಡಿಗಳು ಬಿದ್ದಿದ್ದು, ಈ ಗುಂಡಿಗಳಿಂದ ಜನಸಾಮಾನ್ಯರಿಗೆ ತೊದರೆಯಾಗುತ್ತಿತ್ತು. ಇದಲ್ಲದೇ ವಾಹನ ಸವಾರರಿಗೆ ಕೂಡ ಗುಂಡಿಗಳಿಂದ ಅಪಘಾತವಾಗುವ ಸಂಭವ ಹೆಚ್ಚಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾನ್ಸ್​​ಟೇಬಲ್ ಹೇಮಣ್ಣನವರು ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಗುಂಡಿಗಳುನ್ನು ಬರಿಗೈಯಿಂದಲೇ ಜಲ್ಲಿ ತುಂಬಿಕೊಂಡು ಬಂದು ಮುಚ್ಚುತ್ತಿರುವ ದೃಶ್ಯಗಳನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ:ACB Raid: ದಾವಣಗೆರೆ, ದೊಡ್ಡಬಳ್ಳಾಪುರದಲ್ಲೂ ಅಧಿಕಾರಿಗಳಿಗೆ ಎಸಿಬಿ ಶಾಕ್​

ABOUT THE AUTHOR

...view details