ದಾವಣಗೆರೆ :ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರನಿಗೆ ಕಮೀಷನ್ ಕೊಟ್ಟರಷ್ಟೇ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡ್ತಾರೆ. ಕಮೀಷನ್ ನೀಡದಿದ್ದರೆ ಅಂತವರಿಗೆ ಅನುದಾನ ಇಲ್ಲ. ಬಿಜೆಪಿ ಸರ್ಕಾರ ಲಂಚ ಲಂಚ ಎಂದು ಬಾಯಿ ಬಿಡುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಆರೋಪಿಸಿದರು.
ನಗರದಲ್ಲಿ ಮಾತನಾಡಿದರ ಅವರು, ನಾನು ಯಡಿಯೂರಪ್ಪನವರಿಗೆ ಅನುದಾನಕ್ಕಾಗಿ ಎರಡು ಬಾರಿ ಮನವಿ ಮಾಡಿದ್ದೇನೆ. ಪಕ್ಕದ ತಾಲೂಕಿಗೆ ಅನುದಾನ ಕೊಡುತ್ತಾರೆ. ಆದರೆ, ನಮ್ಮ ಕ್ಷೇತ್ರಕ್ಕೆ ಕೊಟ್ಟೇ ಇಲ್ಲ. ಇನ್ನು, ಟೆಂಡರ್ ಆದವುಗಳನ್ನು ಯಾವ ಪಕ್ಷ, ಸರ್ಕಾರ ಕ್ಯಾನ್ಸಲ್ ಮಾಡಿರಲಿಲ್ಲ. ಆದ್ರೇ, ಬಿಜೆಪಿ ಸರ್ಕಾರ ಕೋವಿಡ್ ಹೆಸರಿನಲ್ಲಿ ಎಲ್ಲವನ್ನೂ ರದ್ದು ಮಾಡಿ ಲೂಟಿ ಹೊಡೆಯುತ್ತಿದೆ. ಬಿಜೆಪಿ ಶಾಸಕರೇ ಅನುದಾನ ಬಿಡುಗಡೆಗೆ 10% ಕಮೀಷನ್ ಕೊಡಬೇಕು ಎಂದು ಆರೋಪಿಸಿದರು.