ದಾವಣಗೆರೆ: ಜಿಲ್ಲೆಯಲ್ಲಿ ನಿರಂತವಾಗಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಬೆಳೆಗಳಯ ಕಟಾವು ಆಗಿದ್ದರಿಂದ ಬೆಳೆ ಹಾನಿ ಕಡಿಮೆ ಪ್ರಮಾಣದಲ್ಲಿ ಆಗಿದೆ. ಜಿಲ್ಲಾಡಳಿತ ಮಳೆಯಿಂದ ಉಂಟಾದ ಅನಾಹುತದ ವಿವರವಾದ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಒಂದು ವಾರದಿಂದ ಸುರಿದ ಮಳೆಗೆ ಮನೆಗಳು ನೆಲಕಚ್ಚಿದ್ದರಿಂದ ಜನ ಹೈರಾಣಾಗಿದ್ದಾರೆ. ಇಂದಿಗೂ ಕೂಡ ಮಳೆ ಹಾನಿ ಮುಂದುವರೆದಿದ್ದು, ಜುಲೈ ಒಂದರಿಂದ ಒಟ್ಟು 175 ಮನೆಗಳ ಕುಸಿದಿದ್ದು, ಒಟ್ಟು ಮೂರು ಸೇತುವೆಗಳು ನಾಶವಾಗಿವೆ. ಇಂದಿಗೂ ಕೂಡ ಚನ್ನಗಿರಿ ಹಾಗೂ ಹೊನ್ನಾಳಿಯ ಭಾಗದಲ್ಲಿ ಮಳೆ ಮುಂದುವರೆದಿದ್ದರಿಂದಾಗಿ ಜನ ರೋಸಿ ಹೋಗಿದ್ದು, ಮನೆ ಕುಸಿತ ಪ್ರಕರಣಗಳು ಮುಂದುವರೆದಿದೆ.