ದಾವಣಗೆರೆ: ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 103 ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಗ್ರಾಮ ಇದಾಗಿದೆ.
COVID-19: ಒಂದೇ ತಿಂಗಳಲ್ಲಿ ಈ ಗ್ರಾಮದ 103 ಮಂದಿಗೆ ಕೊರೊನಾ ಪಾಸಿಟಿವ್! - ದಾವಣಗೆರೆ ಕೊರೊನಾ ಪ್ರಕರಣಗಳ ಸಂಖ್ಯೆ
5,100 ಜನಸಂಖ್ಯೆ ಹೊಂದಿರುವ ಕುಳಕಟ್ಟೆ ಗ್ರಾಮದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದ 274 ಜನರ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 103 ಜನರಿಗೆ ಸೋಂಕು ಪತ್ತೆಯಾಗಿದೆ. ಅಲ್ಲದೆ ಕೋವಿಡ್ ನಿಂದಾಗಿ 4 ಜನರು ಸಹ ಸಾವನ್ನಪ್ಪಿದ್ದಾರೆ.
ಕುಳಗಟ್ಟೆ ಗ್ರಾಮ
5,100 ಜನಸಂಖ್ಯೆ ಹೊಂದಿರುವ ಕುಳಕಟ್ಟೆ ಗ್ರಾಮದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದ 274 ಜನರ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 103 ಜನರಿಗೆ ಸೋಂಕು ಪತ್ತೆಯಾಗಿದೆ.
ಕೋವಿಡ್ ನಿಂದಾಗಿ 4 ಜನರು ಸಹ ಸಾವನ್ನಪ್ಪಿದ್ದಾರೆ. 74 ಜನ ಗುಣಮುಖರಾಗಿದ್ದು, 25 ಜನ ಕೋವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರೂ ಕೂಡ ಎಚ್ಚೆತ್ತುಕೊಳ್ಳದ ಗ್ರಾಮಸ್ಥರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.
Last Updated : Jun 3, 2021, 6:45 PM IST