ಕರ್ನಾಟಕ

karnataka

ಬೆಸ್ಕಾಂ ನಿರ್ಲಕ್ಷ್ಯ: ರಾಜಧಾನಿಯಲ್ಲಿ ಮತ್ತೊಂದು ಬಲಿ

By

Published : Jul 22, 2022, 4:21 PM IST

ಹಲಸೂರಿನ ಯಲ್ಲಮ್ಮನ ಕೋಯಿಲ್ ಸ್ಟ್ರೀಟ್‌‌ ಬಳಿಯ ರಾಜಕಾಲುವೆಯಲ್ಲಿ ಗುಜರಿ ಹೆಕ್ಕಲು ಹೋಗಿದ್ದವನಿಗೆ ವಿದ್ಯುತ್​ ಶಾಕ್​ ತಗುಲಿ ಮೃತಪಟ್ಟ ಘಟನೆ ನಡೆದಿದ್ದು ಇದಕ್ಕೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದೆ.

young man died of electric shock in Bangalore
ಬೆಸ್ಕಾಂ ನಿರ್ಲಕ್ಷ್ಯ: ರಾಜಧಾನಿಯಲ್ಲಿ ಮತ್ತೊಂದು ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ. ಅಪ್ಪು ಮೃತ ದುರ್ದೈವಿಯಾಗಿದ್ದಾನೆ. ಈ ಯುವಕ ನಗರದ ಹಲಸೂರಿನ ಯಲ್ಲಮ್ಮನ ಕೋಯಿಲ್ ಸ್ಟ್ರೀಟ್‌‌ ಬಳಿಯ ರಾಜಕಾಲುವೆಯಲ್ಲಿ ಮುಂಜಾನೆ 6.30 ರ ಸುಮಾರಿಗೆ ಕಬ್ಬಿಣ ಆಯಲು ಬಂದಿದ್ದ. ಪವರ್ ಲೈನ್ ಕಟ್ ಆಗಿ ರಾಜಕಾಲುವೆಯಲ್ಲಿ ಬಿದ್ದಿದ್ದನ್ನು ಅಪ್ಪು ಗಮನಿಸಿರಲಿಲ್ಲ.

ಹೀಗಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಹಲಸೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ತಿಂಗಳು ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಬಾಲಕನೊಬ್ಬ ವಿದ್ಯುತ್ ತಗುಲಿ ಮೃತಪಟ್ಟಿದ್ದ. ಈಗ ಮತ್ತೆ ಅದೇ ರೀತಿಯ ಘಟನೆ ನಡೆದಿದೆ.

ಇನ್ನೂ ಕುಟುಂಬಸ್ಥರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೂರು ದಿನದ ಹಿಂದೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ. ಆದರೆ, ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ‌. ಹೀಗಾಗಿ ಅಪ್ಪು ಮೃತಪಟ್ಟಿದ್ದಾನೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ವ್ಯಕ್ತಿ ಮೇಲೆ ಹರಿದ ಟಿಪ್ಪರ್​: ಚಾಲಕನನ್ನು ಬಂಧಿಸಿದ ವಿಲ್ಸನ್​ ಗಾರ್ಡನ್​ ಪೊಲೀಸರ

ABOUT THE AUTHOR

...view details