ಕರ್ನಾಟಕ

karnataka

ETV Bharat / city

ಸಿಎಂ ಆಗಬೇಕಾದರೆ ಲಂಚ ಕೊಡಬೇಕೆಂಬ ಯತ್ನಾಳ್ ಆರೋಪದ ಬಗ್ಗೆ ತನಿಖೆಯಾಗಬೇಕು: ಡಿಕೆಶಿ - ಸಿಎಂ ಲಂಚ ಆರೋಪ

ಸಿಎಂ ಆಗಬೇಕಾದರೆ ಎರಡೂವರೆ ಸಾವಿರ ಕೋಟಿ, ಮಂತ್ರಿಯಾಗಬೇಕಾದರೆ 100 ಕೋಟಿ‌ ಕೊಡಬೇಕೆಂದು ಯತ್ನಾಳ್ ಅವರೇ ಆರೋಪಿಸಿದ್ದು ತನಿಖೆಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಡಿಕೆಶಿ
ಡಿಕೆಶಿ

By

Published : May 6, 2022, 1:56 PM IST

ಬೆಂಗಳೂರು: ಸಿಎಂ ಆಗಬೇಕಾದರೆ ಎರಡುವರೆ ಸಾವಿರ ಕೋಟಿ ಕೊಡಬೇಕೆಂದು ಯತ್ನಾಳ್ ಆರೋಪಿಸಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಬೇಕಾದರೆ ಎರಡೂವರೆ ಸಾವಿರ ಕೋಟಿ, ಮಂತ್ರಿಯಾಗಬೇಕಾದರೆ 100 ಕೋಟಿ‌ ಕೊಡಬೇಕೆಂದು ಯತ್ನಾಳ್ ಅವರೇ ಆರೋಪಿಸಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಕೂಡಲೇ ತನಿಖೆ ಆಗಬೇಕು. ಎಲ್ಲಾ ಇಲಾಖೆಗೂ ರೇಟ್ ಫಿಕ್ಸ್ ಮಾಡಿದ್ದಾರೆ. ಯತ್ನಾಳ್ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಯತ್ನಾಳ್ ಮಾಜಿ ಕೇಂದ್ರ ಸಚಿವರು. ಅವರ ಹೇಳಿಕೆ ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಇದೊಂದು ದೊಡ್ಡ ಆರೋಪ. ಇದು ರಾಷ್ಟ್ರೀಯ ವಿಚಾರ. ರಾಷ್ಟ್ರ, ರಾಜ್ಯದಲ್ಲಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು. ಕೋವಿಡ್ ಸಾವಿನ ಲೆಕ್ಕ ಮುಚ್ಚಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲಿನಿಂದ ಹೆಚ್ಚು ಸಾವು ಆಗ್ತಿದೆ ಅಂತ ಹೇಳುತ್ತಿದ್ದೆವು. ನಾನು ಸಿದ್ದರಾಮಯ್ಯ ಎಲ್ಲರೂ ಹೇಳುತ್ತಿದ್ದೆವು. 4.5 ಲಕ್ಷ ಜನ ಮೃತಪಟ್ಟಿದ್ದಾರೆ ಅಂತ ಹೇಳಿದ್ದೆವು. ನಮ್ಮ ತಾಲೂಕಿನಲ್ಲಿ 500 ಜನ ಸಾವನ್ನಪ್ಪಿದ್ದರು. ಸರ್ಕಾರ 100 ಜನ ಅಂತ ಹೇಳಿತ್ತು. ಈವರೆಗೆ ಯಾರಿಗೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಡಿಕೆಶಿ ಪ್ರತಿಕ್ರಿಯೆ

(ಇದನ್ನೂ ಓದಿ: 'ನಿಮ್ಮನ್ನು ಸಿಎಂ ಮಾಡ್ತೀವಿ, 2,500 ಕೋಟಿ ರೆಡಿ ಮಾಡಿಡಿ ಅಂದಿದ್ರು': ಯತ್ನಾಳ್)

WHO 47 ಲಕ್ಷ ಜನ ಮೃತಪಟ್ಟಿದ್ದಾರೆ ಅಂದಿದೆ. ಇದು ದೇಶಕ್ಕೆ ಬಿಜೆಪಿ ಸರ್ಕಾರ ಕೊಟ್ಟ ಗಿಫ್ಟ್. ಸುಪ್ರೀಂ ಕೋರ್ಟ್ ಕೂಡಾ ಪರಿಹಾರ ‌ಕೊಡಿ ಎಂದಿದೆ. ಆರೋಗ್ಯ ಸಚಿವರು ಇದನ್ನ ಮುಚ್ಚಿ ಹಾಕ್ತಿದ್ದಾರೆ. ಸಿಎಂ ಕೂಡಲೇ‌ ಮತ್ತೆ ಸಭೆ ಮಾಡಬೇಕು. ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

(ಇದನ್ನೂ ಓದಿ: 'ವಿಜ್ಞಾನ ಸುಳ್ಳು ಹೇಳಲ್ಲ,ಮೋದಿ ಹೇಳ್ತಾರೆ': ಕೋವಿಡ್ ಸಾವಿನ ವಿಚಾರವಾಗಿ ರಾಹುಲ್ ವಾಗ್ದಾಳಿ)

ABOUT THE AUTHOR

...view details