ಕರ್ನಾಟಕ

karnataka

ETV Bharat / city

ವೈಟ್​ಫೀಲ್ಡ್ ವಿಭಾಗದಲ್ಲಿ 116 ರೌಡಿಗಳ ಮನೆ ಮೇಲೆ ಏಕಕಾಲಕ್ಕೆ ರೇಡ್!

ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು ಪೊಲೀಸರು 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವೈಟ್​​​ಫೀಲ್ಡ್ ವಿಭಾಗದಲ್ಲಿ 116 ರೌಡಿಶೀಟರ್ ಮನೆಗಳ ಮೇಲೆ ದಾಳಿ ಮಾಡಿ ಹಲವರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

whitefield-section-police-raided-several-rowdy-houses
ವೈಟ್​ಫೀಲ್ಡ್ ವಿಭಾಗದಲ್ಲಿ 116 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

By

Published : Jul 10, 2021, 4:56 PM IST

ಬೆಂಗಳೂರು:ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರಾದ್ಯಂತ ಇಂದು ಬೆಳಗ್ಗೆ ರೌಡಿ‌ಶೀಟರ್​​​ಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವೈಟ್‌ಫೀಲ್ಡ್ ವಿಭಾಗದಲ್ಲಿ ಡಿಸಿಪಿ ದೇವರಾಜ್ ನೇತೃತ್ವದಲ್ಲಿ 116 ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.

ಅಲ್ಲದೆ 82 ರೌಡಿಗಳನ್ನು ವಶಕ್ಕೆ ಪಡೆಯಲಾಗಿದ್ದು, 15 ರೌಡಿಗಳ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 110ರ ಅಡಿ ಪ್ರಕರಣ ದಾಖಲಿಸಲಾಗಿದೆ. ದಾಳಿ ವೇಳೆ ಸುಮಾರು 2.5 ಕೆ.ಜಿ ಗಾಂಜಾ ಜಪ್ತಿಯಾಗಿದ್ದು, ಮೂವರು ರೌಡಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಮಹದೇವಪುರ ಠಾಣಾ ಇಬ್ಬರು ರೌಡಿಗಳ ಮನೆಯಲ್ಲಿ ಪರಿಶೀಲನೆ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿದ್ದು, ಶಸ್ತಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

ಜೊತೆಗೆ ಪ್ರಮುಖ ರೌಡಿಶೀಟರ್​​​ಗಳಾದ ಮಾರತಳ್ಳಿ ಪೊಲೀಸ್ ಠಾಣೆಯ ರೌಡಿ ರೋಹಿತ್, ಕೆಆರ್ ಪುರಂ ಗಿರಿ ಅಲಿಯಾಸ್ ಗುಬ್ಬಚ್ಚಿ, ಬೆಳ್ಳಂದೂರು ಬೋಗನಹಳ್ಳಿ ಕೀರ್ತಿ, ಮಾರತ್ತಹಳ್ಳಿ ಸೋಮು ಸೇರಿದಂತೆ ಪ್ರಮುಖ ರೌಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲವರ ಮೇಲೆ ಪ್ರಕರಣ

ಇನ್ನು ಎಲ್ಲಾ ರೌಡಿಗಳನ್ನು ವೈಟ್ ಫೀಲ್ಡ್ ಡಿಸಿಪಿ ಕಚೇರಿಗೆ ಕರೆತಂದು ಪೆರೇಡ್ ಮಾಡಿ ಕೆಲವರ ಮೇಲೆ ಪ್ರಕರಣ ದಾಖಲು ಮಾಡಿ ಉಳಿದವರನ್ನು ಬಿಟ್ಟು ಕಳಿಸಿದ್ದಾರೆ. ಈ‌ ಸಂದರ್ಭದಲ್ಲಿ ಎಸಿಪಿ ಮನೋಜ್ ಕುಮಾರ್ ಸೇರಿದಂತೆ ವೈಟ್ ಫೀಲ್ಡ್ ಡಿವಿಜನ್ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್​ಪೆಕ್ಟರ್, ಸಬ್ ಇನ್ಸ್​​ಪೆಕ್ಟರ್ ಭಾಗಿಯಾಗಿದ್ದರು.

ವೈಟ್​ಫೀಲ್ಡ್ ವಿಭಾಗದಲ್ಲಿ 116 ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

ವೈಟ್​ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್​ಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆ ವರ್ತೂರಿನ ಗುಂಜೂರು ಪಾಳ್ಯದಲ್ಲಿ ನಾಲ್ವರು ಯುವಕರು ಹನ್ನೊಂದು ಲಾಂಗ್​​​​ಗಳನ್ನು ಮನೆಯಲ್ಲಿಟ್ಟುಕೊಂಡಿದ್ದ ಯುವಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು.

ಈ ಕುರಿತು ಮಾತನಾಡಿದ ಡಿಸಿಪಿ ದೇವರಾಜ್, ಇಂದು ಬೆಳಗ್ಗೆ ಪೊಲೀಸ್ ಆಯುಕ್ತರು ಕಮಲ್ ಪಂತ್ ಅವರ ನೇತೃತ್ವದಲ್ಲಿ ಮತ್ತು ಅವರ ಆದೇಶದ ಮೇರೆಗೆ ಬೆಂಗಳೂರಿನ ಎಲ್ಲಾ ಕಡೆ ರೌಡಿಶೀಟರ್​ಗಳ ಮನೆ ಮೇಲೆ ದಾಳಿ ಮಾಡಲಾಗಿದೆ. ವೈಟ್ ಫೀಲ್ಡ್ ವಿಭಾಗದ 8 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಪೊಲೀಸ್ ‌ಇನ್ಸ್​ಪೆಕ್ಟರ್, 50 ಸಬ್ ಇನ್ಸ್​ಪೆಕ್ಟರ್, 200 ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಸೂಮಾರು‌ 116 ಮನೆಗಳ ಮೇಲೆ ದಾಳಿ ಮಾಡಲಾಗಿದೆ ಎಂದರು.

ಓದಿ:3ನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿಲ್ಲ ಎಂದು ತಜ್ಞರ ವರದಿಯಲ್ಲಿದೆ : ಸಚಿವ ಡಾ.ಸುಧಾಕರ್

ABOUT THE AUTHOR

...view details