ಕರ್ನಾಟಕ

karnataka

ETV Bharat / city

900ಮೀ ಉದ್ದದ ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಹೊರಬಂದ ಟಿಬಿಎಂ ವಿಂಧ್ಯಾ

ಸುಮಾರು 13 ಕಿ.ಮೀ ಸುರಂಗ ಕಾರ್ಯ ಪ್ರಗತಿಯಲ್ಲಿದ್ದು, ಟಿಬಿಎಂ ವಿಂಧ್ಯಾ 900ಮೀಟರ್ ಉದ್ದದ ಕಲ್ಲು ಬಂಡೆಗಳನ್ನು ಕೊರೆದು ಪಾಟರಿ ಟೌನ್ ಬಳಿ ಹೊರ ಬಂದಿದೆ.

TBM Vindhya came out after digging Namma metro tunnel
ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಹೊರಬಂದ ಟಿಬಿಎಂ ವಿಂಧ್ಯಾ

By

Published : Aug 19, 2022, 7:04 AM IST

Updated : Aug 19, 2022, 11:01 AM IST

ಬೆಂಗಳೂರು : ಫೆಬ್ರವರಿ 2 ರಂದು ನಮ್ಮ ಮೆಟ್ರೋದ ಕಂಟೋನ್ಮೆಂಟ್ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದ ಕಡೆ ಸುರಂಗ ಪ್ರವೇಶಿಸಿದ್ದ ವಿಂಧ್ಯಾ ಟನೆಲ್ ಬೋರಿಂಗ್ ಮಷೀನ್ ಗುರುವಾರ ತನ್ನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿದೆ.

ರಾಜಧಾನಿಯ ನಮ್ಮ‌ ಮೆಟ್ರೋದ ಕಾಮಗಾರಿ ಗೊಟ್ಟಗೆರೆ ನಾಗವಾರ ಮಾರ್ಗವಾಗಿ ನಡೆಯುತ್ತಿದೆ. ಸುಮಾರು 13 ಕಿ.ಮೀ ಸುರಂಗ ಕಾರ್ಯ ಪ್ರಗತಿಯಲ್ಲಿದೆ. ಟಿಬಿಎಂ ವಿಂಧ್ಯಾ 900ಮೀಟರ್ ಉದ್ದ ಕಲ್ಲು ಬಂಡೆಗಳನ್ನು ಕೊರೆದು ಪಾಟರಿ ಟೌನ್ ಬಳಿ ಹೊರ ಬಂದಿದೆ ಎಂದು ಬಿ.ಎಂ.ಆರ್.ಸಿ ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಹೊರಬಂದ ಟಿಬಿಎಂ ವಿಂಧ್ಯಾ

ಊರ್ಜಾ ಟಿಬಿಎಂ ತನ್ನ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಹೊರಬಂದಿತ್ತು.‌ ಇಂದು ವಿಂಧ್ಯಾ ಹೆಸರಿನ ಟಿಬಿಎಂ ಕಾರ್ಯ ಪೂರ್ಣಗೊಳಿಸಿದೆ. ಒಟ್ಟು 1755 ಮೀಟರ್ ಉದ್ದ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸಲಾಗಿದ್ದು, ಇನ್ನುಳಿದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನಮ್ಮ‌ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಮೆಟ್ರೋ 2ನೇ ಹಂತದ 900ಮೀ ಸುರಂಗ ಕಾರ್ಯ ಪೂರ್ಣಗೊಳಿಸಿದ ಉರ್ಜಾ ಟಿಬಿಎಂ

Last Updated : Aug 19, 2022, 11:01 AM IST

ABOUT THE AUTHOR

...view details