ಕರ್ನಾಟಕ

karnataka

By

Published : Apr 20, 2021, 4:46 PM IST

ETV Bharat / city

ವಿಧಾನಸೌಧದಿಂದ ಸಿಎಂ ಗೃಹ ಕಚೇರಿಗೆ ವಿಡಿಯೋ ಸಂವಾದ ಶಿಫ್ಟ್..!

ಕೊನೆ ಕ್ಷಣದಲ್ಲಿ ವಿಧಾನಸೌಧದ ಬದಲು ಸಿಎಂ ಗೃಹ ಕಚೇರಿ ಕೃಷ್ಣಾಗೆ ವಿಡಿಯೋ ಸಂವಾದ ಸ್ಥಳಾಂತರವಾಗಿದೆ. ಸದ್ಯ ಕೃಷ್ಣಾದಲ್ಲಿ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಕಲ್ಪಿಸಿದ್ದು, 4.30 ರಿಂದ 5.30 ರವರೆಗೆ ವಿಡಿಯೋ ಸಂವಾದದ ಮೂಲಕ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಸಿಎಂ
ಸಿಎಂ

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತು ರಾಜ್ಯಪಾಲ ವಜುಭಾಯ್ ವಾಲಾ ಕರೆದಿದ್ದ ಸರ್ವಪಕ್ಷ ಸಭೆ ಕೊನೆ ಕ್ಷಣದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಸ್ಥಳಾಂತರಗೊಂಡಿದೆ.

ಇಂದು ಸಂಜೆ 4.30ಕ್ಕೆ ಕೊರೊನಾ ನಿಯಂತ್ರಣ ಕುರಿತು ರಾಜ್ಯಪಾಲರು ಕರೆದಿದ್ದ ಸರ್ವಪಕ್ಷ ಸಭೆ ಆರಂಭಗೊಳ್ಳಲಿದ್ದು, ರಾಜಭವನದಿಂದ ರಾಜ್ಯಪಾಲ ವಜುಭಾಯ್ ವಾಲಾ, ಮಣಿಪಾಲ್ ಆಸ್ಪತ್ರೆಯಿಂದ ಸಿಎಂ ಯಡಿಯೂರಪ್ಪ, ಕುಮಾರಪಾರ್ಕ್​ನ ಸರ್ಕಾರಿ ನಿವಾಸದಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಚೇರಿಯಿಂದ ಡಿ.ಕೆ ಶಿವಕುಮಾರ್, ಸದಾಶಿವನಗರ ನಿವಾಸದಿಂದ ಡಾ.ಸುಧಾಕರ್ ಹಾಗೂ ವಿಧಾನಸೌಧದಿಂದ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗಿಯಾಗಬೇಕಿತ್ತು.

ಆದರೆ, ಕೊನೆ ಕ್ಷಣದಲ್ಲಿ ವಿಧಾನಸೌಧದ ಬದಲು ಸಿಎಂ ಗೃಹ ಕಚೇರಿ ಕೃಷ್ಣಾಗೆ ವಿಡಿಯೋ ಸಂವಾದ ಸ್ಥಳಾಂತರವಾಗಿದೆ. ಸದ್ಯ ಕೃಷ್ಣಾದಲ್ಲಿ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಕಲ್ಪಿಸಿದ್ದು, 4.30 ರಿಂದ 5.30 ರವರೆಗೆ ವಿಡಿಯೋ ಸಂವಾದದ ಮೂಲಕ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಸಭೆ ನಂತರ ಸರ್ಕಾರದ ನಿರ್ಧಾರದ ಕುರಿತು ಕಂದಾಯ ಸಚಿವ ಆರ್.ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.

ABOUT THE AUTHOR

...view details