ಬೆಂಗಳೂರು : ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಿದ್ದರೂ ಸಹ ಅಲ್ಲಲ್ಲಿ ನಿಯಮ ಉಲ್ಲಂಘಟನೆಯಂತಹ ಘಟನೆ ನಡೆದಿವೆ. ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಡಿಸಿಪಿ ಪ್ರಮಾಣ ವಚನ ಬೋಧನೆ :ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಪಾನಿಧಿ ಸರ್ಕಲ್‌ನಲ್ಲಿ ಲಾಕ್ಡೌ್ನ್ ನಿಯಮ ಉಲ್ಲಂಘನೆ ಮಾಡಿದವರಿಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದರು.
ಕಠಿಣ ಲಾಕ್ಡೌನ್ ನಡುವೆಯೂ ಅನಗತ್ಯ ವಾಹನ ಸಂಚಾರ ಆಟೋ ಚಾಲಕರಿಗೆ ಬಸ್ಕಿ ಶಿಕ್ಷೆ :ಅನಗತ್ಯವಾಗಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಮಾರ್ಕೆಟ್ ಪೊಲೀಸರು ಬಸ್ಕಿ ಹೊಡಿಸಿದರು. ಈ ಸಂದರ್ಭದಲ್ಲಿ ನಾಳೆಯಿಂದ ಆಟೋ ಹೊರಗೆ ತೆಗೆಯಲ್ಲ ಸರ್ ಎಂದು ಕಿವಿ ಹಿಡಿದು ಆಟೋ ಚಾಲಕರು ಪೊಲೀಸರಲ್ಲಿ ಮನವಿ ಮಾಡಿದರು. ನಂತರ ಪೊಲೀಸರು ಆಟೋಗಳನ್ನು ಬಿಟ್ಟು ಕಳುಹಿಸಿದ್ದಾರೆ.
ನಕಲಿ ಪತ್ರಕರ್ತನ ವಾಹನ ಸೀಜ್ : ವಿಕ್ಟೋರಿಯಾ ಮಾರ್ಚರಿ ಬಳಿ ವ್ಯಕ್ತಿಯೊಬ್ಬ ಪತ್ರಕರ್ತ ಎಂದು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದ. ವಿಚಾರಿಸಿದಾಗ ಅವನು ನಕಲಿ ಪತ್ರಕರ್ತ ಎಂದು ತಿಳಿದು ಬಂದಿತ್ತು. ಸದ್ಯ ಕಮೀಷನ್ ವಾಹನ ಸೀಜ್ ಮಾಡಲು ಹೇಳಿದ್ದಾರೆ.
ಪೊಲೀಸ್ ಜೊತೆ ವಾಗ್ದಾದಕ್ಕಿಳಿದ ಬೈಕ್ ಸವಾರ :ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದರು. ವ್ಯಕ್ತಿಯೊಬ್ಬ ಬೈಕ್ ಸವಾರಿ ಮಾಡಿಕೊಂಡು ಬಂದಿದ್ದ. ಅವನನ್ನು ತಡೆದ ಪೊಲೀಸರು ಪ್ರಶ್ನಿಸಿದಾಗ ಯುವಕ ವಾಗ್ವಾದಕ್ಕಿಳಿದ್ದಾನೆ. ಸದ್ಯ ಬೈಕ್ ಸೀಜ್ ಮಾಡಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.