ಬೆಂಗಳೂರು :ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ಬಸ್ ಸಂಚಾರ ಸೇವೆ ಇದೀಗ ಆರಂಭವಾಗಿದೆ. ಕೋವಿಡ್ ನಿಂದಾಗಿ ನಿರ್ಬಂಧ ಸಿಡಿಸಿರುವುದರಿಂದ ನಗರದಲ್ಲಿ ಜನರ ಓಡಾಟ ಹೆಚ್ಚಾಗಿದೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಯು ವಜ್ರ ಬಸ್ ಸೇವೆಯನ್ನು ಪುನಾರಂಭ ಮಾಡಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಪ್ರಮುಖ ಮಾರ್ಗಗಳಿಗೆ ವಾಯು ವಜ್ರ ಬಸ್ ಸೇವೆ ಆರಂಭ
ರಾಜ್ಯ ರಾಜಧಾನಿ ಅನ್‌ಲಾಕ್ ಆಗಿರುವ ಕಾರಣ ನಗರದ ಪ್ರಮುಖ ಮಾರ್ಗಗಳಲ್ಲಿ ವಾಯು ವಜ್ರ ಬಸ್ ಸೇವೆ ಆರಂಭಿಸಲು ಬಿಎಂಟಿಸಿ ಮುಂದಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬನಶಂಕರಿ ಟಿಟಿಎಂಸಿ, ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ ಹೆಚ್ಚುವರಿ ವಾಯು ವಜ್ರ ಬಸ್‌ಗಳ ಸೇವೆಯನ್ನು ಇಂದಿನಿಂದ ಆರಂಭಿಸಿದೆ.
ಪ್ರಸ್ತುತ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿಗೆ (ಮಾರ್ಗಸಂಖ್ಯೆ ಕೆಐಎ 8ರಲ್ಲಿ 8 ಅನುಸೂಚಿಗಳಿಂದ 45 ಸುತ್ತುವಳಿಗಳು) ಹಾಗೂ ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮಾರ್ಗಸಂಖ್ಯೆ ಕೆಐಎ-9 ರಲ್ಲಿ 9 ಅನುಸೂಚಿಗಳಿಂದ 74 ಸುತ್ತುವಳಿಗಳು), ಒಟ್ಟು 17 ಅನುಸೂಚಿಗಳಿಂದ 10 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಇನ್ನು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸಲು, ಹೆಚ್ಚುವರಿಯಾಗಿ ಎರಡು ಮಾರ್ಗಗಳಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬನಶಂಕರಿ ಟಿಟಿಎಂಸಿಗೆ (ವಾರ್ಗಸಂಖ್ಯೆ ಕಣ ರಲ್ಲಿ 4 ಅನುಸೂಚಿಗಳಿಂದ 32 ಸುತ್ತುವಳಿಗಳು) ಮತ್ತು ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ (ಮಾರ್ಗಸಂಖ್ಯೆ ಕೆಐಎ-10 ರಲ್ಲಿ 4 ಅನುಸೂಚಿಗಳಿಂದ 28 ಸುತ್ತುವಳಿಗಳು), ಒಟ್ಟು 8 ಅನುಸೂಚಿಗಳಿಂದ 60 ಸುತ್ತುವಳಿಗಳನ್ನು ಇಂದಿನಿಂದ ಪ್ರಾರಂಭಿಸಲಾಗುತ್ತಿದೆ.