ಬೆಂಗಳೂರು:ಇಂದಿನಿಂದ ರಾಜ್ಯದ ನಿಗದಿತ ಕೇಂದ್ರಗಳಲ್ಲಿ 18 ರಿಂದ 44 ವರ್ಷ ವಯಸ್ಸಿನವರಿಗೆ ಕೋವಿಡ್-19 ಲಸಿಕೆ ನೀಡಲಾಗುತ್ತದೆ. ಈಗಾಗಲೇ ನೋಂದಣಿ ಮಾಡಿಕೊಂಡವರು ತಮಗೆ ಬಂದಿರುವ ಸಂದೇಶವನ್ನು ಪೊಲೀಸರಿಗೆ ತೋರಿಸಿ ಲಸಿಕೆ ಪಡೆಯಲು ತೆರಳಬಹುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ: ಎಸ್ಎಂಎಸ್ ಬಂದವರಿಗೆ ಮಾತ್ರ ಅವಕಾಶ
18 ರಿಂದ 44ರ ವಯಸ್ಸಿನವರಿಗೆ ರಾಜ್ಯ ಸರ್ಕಾರ ಇಂದಿನಿಂದ ಕೋವಿಡ್ ಲಸಿಕೆ ನೀಡುತ್ತಿದೆ. ಫಲಾನುಭವಿಗಳು ಆನ್ಲೈನ್ನಲ್ಲಿ ಕಡ್ಡಾಯವಾಗಿ ಹೆಸರನ್ನು ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಣಿಯ ನಂತರ ತಮ್ಮ ಮೊಬೈಲ್ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಬಗ್ಗೆ ಎಸ್ಎಂಎಸ್ ಸ್ವೀಕರಿಸಿರಬೇಕು.
state
18 ರಿಂದ 44 ವರ್ಷ ವಯಸ್ಸಿನ ನಡುವಿನ ಫಲಾನುಭವಿಗಳು ಆನ್ಲೈನ್ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಂಡಿರಬೇಕು ಹಾಗೂ ನೋಂದಣಿಯ ನಂತರ ತಮ್ಮ ಮೊಬೈಲ್ನಲ್ಲಿ ಸಮಯ ಮತ್ತು ದಿನಾಂಕ ನಿಗದಿಯ ಬಗ್ಗೆ ಎಸ್ಎಂಎಸ್ ಸ್ವೀಕರಿಸಿರಬೇಕು.
ಇಂದಿನಿಂದ 14 ದಿನಗಳ ಕಾಲ ಲಾಕ್ಡೌನ್ ಆರಂಭವಾಗಲಿದ್ದು, ಕಟ್ಟುನಿಟ್ಟಿನ ಈ ಸಂದರ್ಭದಲ್ಲಿ ಫಲಾನುಭವಿಗಳು ಮೊಬೈಲ್ನಲ್ಲಿ ಸ್ವಿಕರಿಸಿದ ಎಸ್ಎಂಎಸ್ ಪರಿಶೀಲಸಿದ ನಂತರವಷ್ಟೇ ಪೊಲೀಸರು ಲಸಿಕಾ ಕೇಂದ್ರಗಳಿಗೆ ತೆರಳಲು ಅನುಮತಿ ನೀಡಲಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.
Last Updated : May 10, 2021, 6:04 AM IST