ಕರ್ನಾಟಕ

karnataka

ETV Bharat / city

ಕಟ್ಟಡದಲ್ಲಿ ಅಗ್ನಿ ಅನಾಹುತ ಪ್ರಕರಣ: ಸೋಮವಾರವಷ್ಟೇ ಅಮೆರಿಕದಿಂದ ಬಂದಿದ್ದರು! - fire in bengaluru apartment

ಆಶ್ರಿತ್ ಅಪಾರ್ಟ್​​ಮೆಂಟ್ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಐದು ಮಹಡಿ ಹೊಂದಿರುವ ಕಟ್ಟಡವಾಗಿದೆ. ಇದರಲ್ಲಿ ಸುಮಾರು 70ಕ್ಕೂ‌ ಹೆಚ್ಚು ಫ್ಲ್ಯಾಟ್​​ಗಳಿವೆ.

updates-of-fire-accident-in-bengaluru-apartment
ಕಟ್ಟಡದಲ್ಲಿ ಅಗ್ನಿ ಅನಾಹುತ ಪ್ರಕರಣ: ಸೋಮವಾರವಷ್ಟೇ ಅಮೆರಿಕದಿಂದ ಬಂದಿದ್ದವರು ಸಜೀವ ದಹನ

By

Published : Sep 22, 2021, 12:49 AM IST

ಬೆಂಗಳೂರು:ನಗರದ ದೇವರಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್​ನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಶವಗಳನ್ನು‌ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಕುಟುಂಬಸ್ಥರ ಸಹಿ ಪಡೆದು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಅವಘಡದಲ್ಲಿ ಗಾಯಗೊಂಡವರಿಗೆ ಈಗಾಗಲೇ ಚಿಕಿತ್ಸೆ ಕೊಡಿಸಲಾಗಿದೆ. ಮಂಗಳವಾರ ಸಂಜೆ 4.30ರ ವೇಳೆ ಮೂರನೇ ಮಹಡಿಯ ಫ್ಲ್ಯಾಟ್​​ನಲ್ಲಿ ಸ್ಫೋಟದ ಶಬ್ಧ ಕೇಳಿಬಂದಿತ್ತು. ನೋಡು ನೋಡುತ್ತಿದ್ದಂತೆ ಅಪಾರ್ಟ್​​ಮೆಂಟ್​ಗೆ ಅಗ್ನಿ ವ್ಯಾಪ್ತಿಸಿ ತಾಯಿ ಲಕ್ಷ್ಮೀದೇವಿ ಹಾಗೂ ಮಗಳು ಭಾಗ್ಯರೇಖಾ ಸಜೀವ ದಹನವಾಗಿದ್ದರು‌. ಗಾಯಗೊಂಡ ಇನ್ನುಳಿದ ಇಬ್ಬರನ್ನು‌ ಆಸ್ಪತ್ರೆಗೆ ಸೇರಿಸಲಾಗಿದೆ.

ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದ ತಾಯಿ-ಮಗಳು

ಅಮೆರಿಕದ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯರೇಖಾ ಹಾಗೂ ತಾಯಿ ಲಕ್ಷ್ಮೀದೇವಿ ನಿನ್ನೆಯಷ್ಟೇ ಅಮೆರಿಕದಿಂದ ಮನೆಗೆ ಬಂದಿದ್ದರಂತೆ. ಅವಘಡ ಸಂಭವಿಸಿದ ವೇಳೆ ರಕ್ಷಣೆ ಮಾಡಲು ಮುಂದಾಗಿದ್ದ ಭೀಮಸೇನ ಎಂಬುವವರಿಗೂ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ನೆಲಮಹಡಿ ಸೇರಿದಂತೆ ಐದು ಮಹಡಿ ಹೊಂದಿರುವ ಆಶ್ರಿತ್ ಅಪಾರ್ಟ್​​ಮೆಂಟ್ ಇದಾಗಿದ್ದು, ಇದರಲ್ಲಿ ಸುಮಾರು 70ಕ್ಕೂ‌ ಹೆಚ್ಚು ಫ್ಲ್ಯಾಟ್​​ಗಳಿವೆ.

ದುರ್ಘಟ‌ನೆ ಬೆನ್ನಲೇ ಅಪಾರ್ಟ್​​ಮೆಂಟ್ ನಿವಾಸಿಗಳನ್ನು ಮುಂಬದಿ‌ ಇರುವ ಬೇರೆಡೆ ಅಪಾರ್ಟ್​​ಮೆಂಟ್​​ಗೆ ಸ್ಥಳಾಂತರಿಸಲಾಗಿದೆ‌. ಬೇರೆ ಮನೆಯವರಿಗೆ ಬೇರೆ ಕಡೆ ಊಟ, ಉಪಚಾರದ ವ್ಯವಸ್ಥೆ ಮಾಡಲಾಗಿದೆ. ಯಾರೂ ಒಳ ಹೋಗದಂತೆ ಪೊಲೀಸ್ ಭದ್ರತೆ ಮಾಡಲಾಗಿದೆ.

ಇದನ್ನೂ ಓದಿ:ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: ಅಗ್ನಿಯ ಕೆನ್ನಾಲಿಗೆಗೆ ತಾಯಿ-ಮಗಳು ಸಜೀವ ದಹನ

ABOUT THE AUTHOR

...view details