ಬೆಂಗಳೂರು:ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3 ಸಾವಿರ ರೂ ಕೋವಿಡ್ ಪರಿಹಾರ ಹಣ ಪಡೆಯಲು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸಾರಿಗೆ ಇಲಾಖೆ ಪ್ರಕಟಿಸಿದೆ. ಜುಲೈ ತಿಂಗಳ 15 ರಂದು ಸಂಜೆ 6 ಗಂಟೆಯೊಳಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಚಾಲಕರು ಅರ್ಜಿ ಸಲ್ಲಿಸಬಹುದು.
ಚಾಲಕರ ಕೋವಿಡ್ ಪರಿಹಾರ ಧನ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ
ಸರ್ಕಾರದಿಂದ ಪರಿಹಾರ ಧನ ಪಡೆಯಲು 'ಸೇವಾ ಸಿಂಧು' ವೆಬ್ ಪೋರ್ಟಲ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಮೇ 27 ರಿಂದ ಪ್ರಾರಂಭಿಸಲಾಗಿತ್ತು. ಸದ್ಯ ಸರ್ಕಾರದ ಸೂಚನೆಯಂತೆ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಾಲಕರ ಕೋವಿಡ್ ಪರಿಹಾರ ಧನ
ಸರ್ಕಾರದ ಆದೇಶ ಮೇರೆಗೆ ಮೇ 21 ರಂದು ಹೊರಡಿಸಿದ ಅಧಿಸೂಚನೆಯನ್ವಯ ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3,000 ರೂ. ಪರಿಹಾರ ಧನ ನೀಡಲು ಮಂಜೂರಾತಿ ನೀಡಿ ಆದೇಶ ಹೊರಡಿಸಲಾಗಿತ್ತು ಎಂದು ಸಾರಿಗೆ ಆಯುಕ್ತರು ತಿಳಿಸಿದ್ದಾರೆ.