ಬೆಂಗಳೂರು : ತರಬೇತಿಯಲ್ಲಿ ನಿರತ ಲಘು ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ಭಾನುವಾರ ಸಂಜೆ ನಗರದ ಜಕ್ಕೂರು ವಾಯುನೆಲೆಯಲ್ಲಿ ನಡೆದಿದೆ. ಖಾಸಗಿ ಕಂಪನಿಗೆ ಸೇರಿದ ವಿಮಾನದಲ್ಲಿ ತರಬೇತಿ ನಡೆಯುತ್ತಿದ್ದಾಗ ಲ್ಯಾಂಡಿಂಗ್ ಆದ ವಿಮಾನ ಪಲ್ಟಿಯಾದ ಪರಿಣಾಮ ಪೈಲಟ್ಗಳಾದ ಕ್ಯಾಪ್ಟನ್ ಆಕಾಶ್ ಹಾಗೂ ಚೆರ್ಲಿ ಆ್ಯನ್ ಸ್ಟರ್ನ್ಸ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೈಲಟ್‌ಗಳ ಪ್ರಕಾರ 'ಲ್ಯಾಂಡಿಂಗ್ ಆಗಿ ಸ್ವಲ್ಪ ದೂರ ಸಾಗುತ್ತಿದ್ದಂತೆ ರನ್ ವೇನಲ್ಲಿ ನಾಯಿಗಳು ಕಾಣಿಸಿಕೊಂಡಿದ್ದು, ತಪ್ಪಿಸುವ ಯತ್ನದಲ್ಲಿ ವಿಮಾನ ಪಲ್ಟಿಯಾಗಿದೆ' ಎನ್ನಲಾಗಿದೆ.