ಕರ್ನಾಟಕ

karnataka

ETV Bharat / city

ನಾಳೆ ಅನರ್ಹ ಶಾಸಕರ ತೀರ್ಪು ಪ್ರಕಟ... ವಿ.ಎಸ್​.ಉಗ್ರಪ್ಪ ಹೇಳಿದ್ದೇನು ? - ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡು ನಾಲಿಗೆಯಿದೆ. ಒಂದೆಡೆ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

Karnataka political developments

By

Published : Nov 12, 2019, 10:47 PM IST

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎರಡು ನಾಲಿಗೆಯಿದೆ. ಒಂದೆಡೆ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಅವರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ನಾಳೆ ಅನರ್ಹ ಶಾಸಕರ ಪ್ರಕರಣದ ತೀರ್ಪು ಪ್ರಕಟವಾಗುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್​​​ನಲ್ಲಿ ಪ್ರಕರಣ ಬಂದಾಗ ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ, ಕೋರ್ ಕಮಿಟಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅನರ್ಹರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ₹ 300, 800, 1000 ಕೋಟಿ ಅನುದಾನ ಬಿಡುಗಡೆ ನೀಡಿದ್ದಾರೆ ಎಂದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ವೇದಿಕೆ ಹಂಚಿಕೊಂಡ ಅವರನ್ನು ಅನರ್ಹ ಶಾಸಕರು ಕೊಂಡಾಡಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸಿದ್ದಾರೆ. ತಮ್ಮ ಶಾಸಕರಿಗೆ ನೀಡದಷ್ಟು ಅನುದಾನ ನೀಡಿದ್ದಾರೆ. ಅವರನ್ನೇ ಆಯ್ಕೆ ಮಾಡಿ ಜನರಿಗೆ ಕರೆ ಕೊಡ್ತಾರೆ. ಈಗ ಟಿಕೆಟ್​​ಗಳನ್ನೂ ಖಾಲಿ ಇಟ್ಟಿದ್ದಾರೆ. ಅವರ ಪರ ಈಗಲೇ ತೀರ್ಪು ಬಂದಂತೆ ಮಾತನಾಡ್ತಾರೆ ಎಂದರು. ಸುಪ್ರೀಂ ಮೇಲೆ ನಮಗೆ ಗೌರವವಿದೆ. ಸುಪ್ರೀಂ ಎಲ್ಲವನ್ನೂ ಗಮನಿಸಿಯೇ ತೀರ್ಪು ನೀಡಲಿದೆ ಎಂದರು.

ಅನರ್ಹರಿಗೆ ತಕ್ಕ ಪಾಠ ಕಲಿಸುವಂತಹ ತೀರ್ಪು ಬರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ನಾಳೆ ಪ್ರಕಟವಾಗುವ ತೀರ್ಪು ಒಂದು ಐತಿಹಾಸಿಕ ತೀರ್ಪು ಆಗಲಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ನಿರೀಕ್ಷೆ ಬಹಳಷ್ಟಿದೆ ಎಂದು ಹೇಳಿದರು.

ABOUT THE AUTHOR

...view details