ಬೆಂಗಳೂರು :ರಾಜ್ಯದಲ್ಲಿಂದು ಮತ್ತೆ ಸಾವಿರಕ್ಕಿಂತ ಕಡಿಮೆ ಕೊರೊನಾ ಪ್ರಕರಣ ಕಂಡು ಬಂದಿವೆ. 1,67,679 ಜನರಿಗೆ ಇಂದು ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 967 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,60,131ಕ್ಕೆ ಏರಿದೆ.
ಕರ್ನಾಟಕ ಕೋವಿಡ್ ವರದಿ : ರಾಜ್ಯದಲ್ಲಿ ಇಂದು 967 ಮಂದಿಗೆ ಕೋವಿಡ್, 10 ಸೋಂಕಿತರ ಸಾವು - ರಾಜ್ಯದ ಇಂದಿನ ಕೊರೊನಾ ಪ್ರಕರಣಗಳು
ಬೆಂಗಳೂರಲ್ಲಿ ಇಂದು 310 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,40,963ಕ್ಕೆ ಏರಿಕೆ ಆಗಿದೆ. 207 ಮಂದಿ ಡಿಸ್ಚಾರ್ಜ್ ಆಗಿದ್ದು, 12,17,608 ಜನ ಗುಣಮುಖರಾಗಿದ್ದಾರೆ..
ಪಾಸಿಟಿವಿಟಿ ದರ ಶೇ.0.57 ರಷ್ಟಿದೆ. ಇನ್ನು, 921 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೆ 29,05,604 ಜನರು ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣ17,028ರಷ್ಟಿವೆ. 10 ಸೋಂಕಿತರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ 37,472ಕ್ಕೆ ಏರಿದೆ. ಈ ಮೂಲಕ ಸಾವಿನ ಶೇಕಡಾವಾರು 1.03 ರಷ್ಟಿದೆ.
ಬೆಂಗಳೂರಲ್ಲಿ ಇಂದು 310 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 12,40,963ಕ್ಕೆ ಏರಿಕೆ ಆಗಿದೆ. 207 ಮಂದಿ ಡಿಸ್ಚಾರ್ಜ್ ಆಗಿದ್ದು, 12,17,608 ಜನ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,045ಕ್ಕೆ ಏರಿದೆ. ಸದ್ಯ 7309 ಸಕ್ರಿಯ ಪ್ರಕರಣಗಳಿವೆ. (ಬೆಂಗಳೂರು ನಗರದಲ್ಲಿ ಡೆಲ್ಟಾ ವೈರಸ್‌ನ ವಂಶವಾಹಿ ತಳಿ ಪತ್ತೆ..)
ರೂಪಾಂತರಿ ವೈರಸ್ ಅಪ್ಡೇಟ್ಸ್
1) ಡೆಲ್ಟಾ (Delta/B.617.2) - 1092
2) ಅಲ್ಪಾ (Alpha/B.1.1.7) - 155
3) ಕಪ್ಪಾ (Kappa/B.1.617) - 160
4) ಬೇಟಾ ವೈರಸ್ (BETA/B.1.351) - 7
5) ಡೆಲ್ಟಾ ಪ್ಲಸ್ (Delta plus/B.1.617.2.1(AY.1) - 4
6) ಈಟಾ (ETA/B.1.525) - 1