ಬೆಂಗಳೂರು: ವ್ಯವಸ್ಥಿತವಾಗಿ ನಡೆಯುತ್ತಿದ್ದ ಲಖನೌ ಟು ಬೆಂಗಳೂರು ಹ್ಯಾಶಿಶ್ ಆಯಿಲ್ ದಂಧೆಯನ್ನು ಬೆಂಗಳೂರು ವಲಯ ಎನ್.ಸಿ.ಬಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಲಖನೌದಿಂದ ಬೆಂಗಳೂರಿಗೆ ರೈಲಿನಲ್ಲಿ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ಇಬ್ಬರು ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಎನ್.ಸಿ.ಬಿ ಅಧಿಕಾರಿಗಳ ತಂಡ ಬಂಧಿಸಿದೆ.
ಬೆಂಗಳೂರು: ಹ್ಯಾಶಿಶ್ ಆಯಿಲ್ ದಂಧೆ ಬಯಲಿಗೆಳೆದ ಎನ್.ಸಿ.ಬಿ
ಲಕ್ನೋದಿಂದ ಬೆಂಗಳೂರಿಗೆ ರೈಲಿನಲ್ಲಿ ಹ್ಯಾಶಿಶ್ ಆಯಿಲ್ ಸಾಗಿಸುತ್ತಿದ್ದ ಇಬ್ಬರು ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ಹಾಗೂ ಹ್ಯಾಶಿಶ್ ಆಯಿಲ್ ರಿಸೀವ್ ಮಾಡಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಮೂಲದ ಮತ್ತೋರ್ವ ಆರೋಪಿಯನ್ನು ಎನ್.ಸಿ.ಬಿ ಅಧಿಕಾರಿಗಳ ತಂಡ ಬಂಧಿಸಿದೆ.
ಹ್ಯಾಶಿಶ್ ಆಯಿಲ್ ದಂಧೆ
ಇದನ್ನೂ ಓದಿ:ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಕಾಂಗ್ರೆಸ್.. ಸುರ್ಜೇವಾಲಾ, ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ
ಬಂಧಿತರು ನೇಪಾಳ ಮೂಲದ ವ್ಯಕ್ತಿಯಿಂದ ಹ್ಯಾಶಿಶ್ ಆಯಿಲ್ ಖರೀದಿಸಿ ಬಳಿಕ ಬ್ಯಾಗಿನಲ್ಲಿ ಬಟ್ಟೆಗಳ ನಡುವೆ ಅಡಗಿಸಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬಂಧಿತರಿಂದ 3.167 ಕೆ.ಜಿ ಹ್ಯಾಶಿಶ್ ಆಯಿಲ್ ಅನ್ನು ಜಪ್ತಿ ಮಾಡಲಾಗಿದ್ದು, ಅವರು ನೀಡಿದ ಮಾಹಿತಿಯನ್ವಯ ಹ್ಯಾಶಿಶ್ ಆಯಿಲ್ ರಿಸೀವ್ ಮಾಡಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಮೂಲದ ಮತ್ತೋರ್ವ ಆರೋಪಿಯನ್ನು ಸಹ ಬಂಧಿಸಲಾಗಿದೆ.
Last Updated : Apr 14, 2022, 2:13 PM IST