ಕರ್ನಾಟಕ

karnataka

ETV Bharat / city

ಈತನೊಬ್ಬ 'ಬ್ರಾಂಡೆಡ್'​ ಕಳ್ಳ...ಸಿ.ಸಿ.ಟಿವಿಯಲ್ಲಿ ಸೆರೆಯಾಯ್ತು ಆತನ ಕರಾಮತ್ತು.. ಈತ ಕದ್ದಿದ್ದೇನು? - ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿ

ಮೊದಲು ಅಪಾರ್ಟ್​ಮೆಂಟ್​ಗಳ ಮನೆಯ ಮುಂಭಾಗ ಇರುತ್ತಿದ್ದ ಬ್ರಾಂಡೆಡ್​ ಶೂಗಳನ್ನು ಎಗರಿಸುತ್ತಿದ್ದ ಕಳ್ಳನ ವಿರುದ್ಧ ಪ್ರಕರಣ ದಾಖಲಾಗಿದೆ.

theft only branded Shoes in front of house
ಈತನೊಬ್ಬ 'ಬ್ರಾಂಡೆಡ್'​ ಕಳ್ಳ.

By

Published : Dec 27, 2019, 1:01 PM IST

ಬೆಂಗಳೂರು:ಈತನ ಗುರಿ ದೊಡ್ಡ ದೊಡ್ಡ ಅಪಾರ್ಟ್ಮೆಂಟ್​​ಗಳು. ಮೊದಲು ಅಪಾರ್ಟ್​ಮೆಂಟ್​ಗಳಲ್ಲಿ ಯಾರ ಮನೆಯಲ್ಲಿ ದುಬಾರಿ ಬೆಲೆಯ ಶೂಗಳಿವೆ ಎಂದು ಪರೀಕ್ಷಿಸುತ್ತಿದ್ದ. ಬಳಿಕ ಹೊಂಚು ಹಾಕಿ ದುಬಾರಿ ಬೆಲೆ ಹಾಗೂ ಉತ್ತಮ ಗುಣಮಟ್ಟ ಕಂಪನಿಗಳ ಶೂಗಳನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ.

ನಗರದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ನಾರಾಯಣಪುರ ಸನ್​​ ಎನ್​​ಕ್ಲೇವ್​ ಅಪಾರ್ಟ್​​ಮೆಂಟ್​ನಲ್ಲಿ ಈ ಘಟನೆ ನಡೆದಿದೆ.

ಸಿ.ಸಿ.ಟಿವಿಯಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು

ಪ್ರತಿ ಮನೆಯ ಮುಂದಿರುವ ಶೂ ಸ್ಟಾಂಡ್​​ಗಳನ್ನ ನೋಡಿ ನೋಡಿ ಕದ್ದು ಅದರಲ್ಲಿ ಬೇಕಾದ ಶೂಗಳನ್ನಷ್ಟೇ ಆಯ್ದುಕೊಂಡು ಅರ್ಧ ಚೀಲದಷ್ಟು ಹೊತ್ತೊಯ್ದಿದ್ದಾನೆ.

ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಾರ್ಟ್​​ಮೆಂಟ್​ನ ನಿವಾಸಿಗಳು ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details