ಬೆಂಗಳೂರು : ವಿಧಾನ ಪರಿಷತ್ತಿನ ಘಟನೆ ಪ್ರಜಾಪ್ರಭುತ್ವದಲ್ಲಿ ಒಂದು ಕಳಂಕವಾಗಿದೆ ಎಂದು ಸಚಿವ ಆರ್.ಅಶೋಕ್ ಕಿಡಿ ಕಾರಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಅವಿಶ್ವಾಸ ನಿರ್ಣಯದ ಪರ ಮತ ಹಾಕಿಸುವುದು ಪ್ರಜಾಪ್ರಭುತ್ವ.
ಅವಿಶ್ವಾಸವೇ ನಡೆಯಬಾರದು ಅಂದ್ರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತೆ?. ಕಾಂಗ್ರೆಸ್ನವರದ್ದು ನಾಟಕ. ದೇಶದಲ್ಲಿ ತುರ್ತು ಪರಿಸ್ಥಿತಿ ತಂದವರು ಅವರು. ಅವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಇದನ್ನೂ ಓದಿ.. ವಿಧಾನ ಪರಿಷತ್ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಧ್ಯೆ ಕಿತ್ತಾಟ
ಕಾಂಗ್ರೆಸ್ಗೆ ಬಲ ಸಾಬೀತುಪಡಿಸುವುದಕ್ಕೆ ಆಗದೆ ಪಲಾಯನ ಮಾಡಿದ್ದಾರೆ. ಸೋಲಿನ ಭಯದಲ್ಲಿ ಪಲಾಯನ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಿಲ್ಲ. ವಿಷಾದನೀಯ ಘಟನೆ. ಇದನ್ನು ಖಂಡಿಸುತ್ತೇನೆ. ಇದು ಕಳಂಕ. ಉಪ ಸಭಾಪತಿಯವರನ್ನು ಎಳೆದಾಡುವುದು ಶೋಭೆ ತರುವ ವಿಚಾರವಲ್ಲ ಎಂದು ವಾಗ್ದಾಳಿ ನಡೆಸಿದರು.