ಬೆಂಗಳೂರು:ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಾಗಿ ಅಲೋಕ್ ಕುಮಾರ್ ಅವರನ್ನ ನೇಮಕ ಮಾಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲೋಕ್ ಕುಮಾರ್ ಸ್ಥಾನಕ್ಕೆ ಭಾಸ್ಕರ್ ರಾವ್ ಅವರನ್ನ ನೇಮಕ ಮಾಡಲಾಗಿತ್ತು.
ಪೊಲೀಸ್ ಆಯುಕ್ತರ ಸರ್ಕಾರಿ ಬಂಗಲೆ ಸಮರ ಕೊನೆಗೂ ಅಂತ್ಯ: ರಾವ್ಗೆ ನಿವಾಸ ಬಿಟ್ಟುಕೊಟ್ಟ ಅಲೋಕ್ ಕುಮಾರ್ - ನಗರ ಪೊಲೀಸ್ ಆಯುಕ್ತ ಭಾಸ್ಕರ್
ಭಾಸ್ಕರರಾವ್ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ರೂ, ಸರ್ಕಾರಿ ಬಂಗಲೆಯನ್ನು ಅಲೋಕ್ ಕುಮಾರ್ ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ಭಾಸ್ಕರ್ ರಾವ್ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ದೂರು ನೀಡಿದ್ದರು. ಇದೀಗ ಅಲೋಕ್ ಕುಮಾರ್ ಅವರು ಬಂಗಲೆಯನ್ನ ಬಿಟ್ಟುಕೊಟ್ಟಿದ್ದಾರೆ.
ಆದ್ರೆ, ಭಾಸ್ಕರ್ ರಾವ್ ಅವರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ್ರೂ, ನಗರ ಪೊಲೀಸ್ ಆಯುಕ್ತರ ಕಚೇರಿಯ ಆವರಣದಲ್ಲಿ ನಗರ ಆಯುಕ್ತರಿಗೆಂದು ಇರುವ ಸರ್ಕಾರಿ ಬಂಗಲೆಯನ್ನ ಅಲೋಕ್ ಕುಮಾರ್ ಮಾತ್ರ ಬಿಟ್ಟು ಕೊಟ್ಟಿರಲಿಲ್ಲ. ಹೀಗಾಗಿ ನೂತನ ಆಯುಕ್ತ ಭಾಸ್ಕರ್ ರಾವ್ ಅವರು ಈ ಕುರಿತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರಿಗೆ ಮಾಹಿತಿ ನೀಡಿದ್ದರು.
ಬಳಿಕ ಡಿಜಿ ನೀಲಮಣಿ ರಾಜು ಅವರು ಅಲೋಕ್ ಕುಮಾರ್ಗೆ ಬಂಗಲೆ ಬಿಟ್ಟು ಕೊಡುವಂತೆ ಸೂಚನೆ ಕೊಟ್ಟಿದ್ರು. ಸದ್ಯ ಅಲೋಕ್ ಕುಮಾರ್ ಅವರು ಬಂಗಲೆಯನ್ನ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಬಿಟ್ಟು ಕೊಟ್ಟಿದ್ದಾರೆ.