ಬೆಂಗಳೂರು:ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಸಿಎಂ ಬೊಮ್ಮಾಯಿ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲೇ ಮಧ್ಯಾಹ್ನದವರೆಗೆ ಇರುವಂತಾಗಿದೆ. ಪರಿಣಾಮ, ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ವರ್ಚುವಲ್ ಮೂಲಕವೇ ಹಾಜರಾದರು.
ತಾಂತ್ರಿಕ ದೋಷದ ಕಾರಣ ವಿಮಾನ ಟೇಕ್ಆಫ್ ಆಗದ ಕಾರಣ ಸಿಎಂ ಈಗಲೂ ಹೆಚ್ಎಎಲ್ ಏರ್ಪೋರ್ಟ್ನಲ್ಲೇ ಉಳಿದುಕೊಂಡಿದ್ದಾರೆ. ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಕೂಡಾ ಬದಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ.
ಸಕಾಲಕ್ಕೆ ಹುಬ್ಬಳ್ಳಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಎಚ್ಎಎಲ್ ಏರ್‌ಪೋರ್ಟ್ ಲಾಂಜ್ನಿಂದಲೇ ಬಿಜೆಪಿ ಕಾರ್ಯಕಾರಿಣಿ ಸಭೆಯ ಪೂರ್ವದಲ್ಲಿ ನಿಗದಿಯಾಗಿದ್ದ 'ಪ್ರಯದರ್ಶಿನಿ' ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ ಸಿಎಂ ಮತ್ತು ಸಚಿವರು ಪಾಲ್ಗೊಂಡರು.
ಮಧ್ಯಾಹ್ನದ ವೇಳೆ ಹೆಚ್ಎಎಲ್ ಏರ್ಪೋರ್ಟ್ಗೆ ಬದಲಿ ವಿಶೇಷ ವಿಮಾನ ಬರಲಿದೆ. ಆ ವಿಮಾನದಲ್ಲಿ ಹುಬ್ಬಳ್ಳಿಗೆ ಸಿಎಂ ಮತ್ತು ಸಚಿವರು ತೆರಳಲಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ದೋಷ: 2 ಗಂಟೆ ಕಾದ್ರೂ ಬಗೆಹರಿಯದ ಸಮಸ್ಯೆ, ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಸಿಎಂ ತೀರ್ಮಾನ