ಬೆಂಗಳೂರು:ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ. ಬರೋಬ್ಬರಿ ₹ 38,451.11 ಕೋಟಿ ನೆರೆಯಿಂದ ಹಾನಿ ಸಂಭವಿಸಿದೆ ಎಂದು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿದೆ.
ಭೀಕರ ಪ್ರವಾಹ: ಕೇಂದ್ರಕ್ಕೆ ₹ 38,451 ಕೋಟಿ ನಷ್ಟದ ವರದಿ ಸಲ್ಲಿಸಿದ ರಾಜ್ಯ ಸರ್ಕಾರ
ರಾಜ್ಯದಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಸಂಪೂರ್ಣ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ.
Submission of Neighborhood Damage Report by the State Government
ಹಾನಿ ಮತ್ತು ನಷ್ಟದ ವಿವರ:
- 8.88 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾನಿ
- 21,818 ಕಿಲೋ ಮೀಟರ್ ರಸ್ತೆ ಹಾನಿ (4,119 ಕಿ.ಮೀ. ರಾಜ್ಯ ಹೆದ್ದಾರಿ, 14,921 ಕಿ.ಮೀ. ಗ್ರಾಮೀಣ ರಸ್ತೆ, 2,778 ಕಿ.ಮೀ ನಗರ ರಸ್ತೆಗಳು)
- 2,47,628 ನೆಲಕಚ್ಚಿದ ಮನೆಗಳು
- 2,193 ಸಂಪೂರ್ಣ ಕಿತ್ತುಹೋದ ಸೇತುವೆಗಳು
- 1,550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಟ್ಯಾಂಕ್ಗಳು ಹಾನಿ
- 10,988 ಸರ್ಕಾರಿ ಕಟ್ಟಡಗಳು ಹಾನಿ
ತುರ್ತು ಪರಿಹಾರ ಕ್ರಮಗಳ ಸ್ಥಿತಿಗತಿ:
- 103 ತಾಲೂಕುಗಳಲ್ಲಿ ತುರ್ತು ಪರಿಹಾರ ಕಾರ್ಯಗಳಿಗೆ ₹ 374 ಕೋಟಿ ಅನುದಾನ ಬಿಡುಗಡೆ
- ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡವರಿಗೆ ₹ 10,000 ಪರಿಹಾರ
- ಈವರೆಗೆ 1.97 ಲಕ್ಷ ಕುಟುಂಬಗಳಿಗೆ ವಿತರಿಸಿದ ಪರಿಹಾರ ₹ 198 ಕೋಟಿ
Last Updated : Sep 5, 2019, 11:03 PM IST