ಕರ್ನಾಟಕ

karnataka

ETV Bharat / city

ವೈದ್ಯಕೀಯ ಪರಿಷತ್ತಿಗೆ ಸದಸ್ಯರ ನೇಮಕ ಪ್ರಶ್ನಿಸಿ ಅರ್ಜಿ: ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

ಕರ್ನಾಟಕ ವೈದ್ಯಕೀಯ ಪರಿಷತ್​​ಗೆ ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆದಿರುವ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ ಮೊಮೊ ದಾಖಲಿಸಿಕೊಂಡಿರುವ ಪೀಠ, ಅರ್ಜಿ ಇತ್ಯರ್ಥಗೊಳಿಸಿ ಆದೇಶಿಸಿದೆ.

State Government has withdrawn the notification issued by the Medical Council on the appointment of members
ವೈದ್ಯಕೀಯ ಪರಿಷತ್ತಿಗೆ ಸದಸ್ಯರ ನೇಮಕ ಪ್ರಶ್ನಿಸಿ ಅರ್ಜಿ: ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ

By

Published : Jan 14, 2021, 6:46 PM IST

ಬೆಂಗಳೂರು:ಕರ್ನಾಟಕ ವೈದ್ಯಕೀಯ ಪರಿಷತ್​​ಗೆ ಐವರು ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ, 2020ರ ಜ.20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮೊಮೊ ಸಲ್ಲಿಸಿದೆ.

ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಡಾ.ಶ್ರೀನಿವಾಸ ಬಿ. ಕಕ್ಕಿಲಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ಅವರಿದ್ದ ಪೀಠಕ್ಕೆ ಸರ್ಕಾರಿ ವಕೀಲರು ಈ ಮಾಹಿತಿ ನೀಡಿದ್ದಾರೆ. ಕರ್ನಾಟಕ ವೈದ್ಯಕೀಯ ಪರಿಷತ್​​ಗೆ ಮೇಲ್ವರ್ಗದ ಪುರುಷರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಹೊರಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆದಿರುವ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ ಮೊಮೊ ದಾಖಲಿಸಿಕೊಂಡಿರುವ ಪೀಠ, ಅರ್ಜಿ ಇತ್ಯರ್ಥಗೊಳಿಸಿ ಆದೇಶಿಸಿದೆ.

ಇದನ್ನೂ ಓದಿ:ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಹಣ ಪಾವತಿಸಿ: ಸರ್ಕಾರಕ್ಕೆ ಹೈಕೋರ್ಟ್ ತಾಕೀತು

ಅರ್ಜಿದಾರರ ಪರ ವಾದಿಸಿದ್ದ ವಕೀಲ ದೊರೆರಾಜ್, ಕರ್ನಾಟಕ ವೈದ್ಯಕೀಯ ಪರಿಷತ್​​ಗೆ ಸದಸ್ಯರನ್ನಾಗಿ ನೇಮಕ ಮಾಡುವಾಗ ಮಹಿಳೆಯರು ಮತ್ತು ಇತರ ವರ್ಗದವರಿಗೂ ಪ್ರಾತಿನಿಧ್ಯ ನೀಡಬೇಕು ಎಂದು ವೈದ್ಯಕೀಯ ಪರಿಷತ್ ಕಾಯಿದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಿದ್ದೂ ರಾಜ್ಯ ಸರ್ಕಾರ ವೈದ್ಯಕೀಯ ಪರಿಷತ್​​ಗೆ ಐವರು ಮೇಲ್ವರ್ಗದ ಪುರುಷರನ್ನಷ್ಟೇ ನೇಮಕ ಮಾಡಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿ ಅಧಿಸೂಚನೆಯನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

ABOUT THE AUTHOR

...view details