ಕರ್ನಾಟಕ

karnataka

ETV Bharat / city

ಡಿಕೆಶಿ ಮಾತಿಗೆ ಬಗ್ಗದ ಅತೃಪ್ತರು: ಮನವೊಲಿಕೆ ಪ್ರಯತ್ನ ವಿಫಲ! - ಡಿಕೆಶಿವಕುಮಾರ್​

ಯಾರೂ ರಾಜೀನಾಮೆ ಕೊಡುತ್ತಿಲ್ಲ. ಅವರ ಮನವೊಲಿಸಲು ನಾನು ಆಗಮಿಸಿದ್ದೇನೆ. ಸರ್ಕಾರ ಉರುಳುವ ಪ್ರಮೇಯವೇ ಇಲ್ಲ -ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್

ಡಿ.ಕೆ.ಶಿವಕುಮಾರ್

By

Published : Jul 6, 2019, 2:30 PM IST

ಬೆಂಗಳೂರು: ಅತೃಪ್ತ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವ ದಿಢೀರ್​ ಬೆಳವಣಿಗೆ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಸ್ಪೀಕರ್ ಕಚೇರಿ ಬಳಿಯಿರುವ ಶಾಸಕರನ್ನು ಭೇಟಿ ಮಾಡಲು ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಯಾರೂ ರಾಜೀನಾಮೆ ಕೊಡುತ್ತಿಲ್ಲ. ಅವರ ಮನವೊಲಿಸಲು ನಾನು ಆಗಮಿಸಿದ್ದೇನೆ. ಸರ್ಕಾರ ಉರುಳುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

ಇನ್ನು ಸೋಮಶೇಖರ್​ ಮಾತನಾಡಿ, ಪಕ್ಷದ ಪರವಾಗಿ ಸ್ಪೀಕರ್ ಭೇಟಿ ಮಾಡಲು ಬಂದಿದ್ದೇವೆ. ರಾಜೀನಾಮೆ ನೀಡಲು ಬಂದಿಲ್ಲ. ಶಾಸಕರನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದರು.

ಡಿಕೆಶಿ ಮನವೊಲಿಕೆಗೆ ಬಗ್ಗದ ಶಾಸಕರು ರಾಜೀನಾಮೆ ಸಲ್ಲಿಸಿ, ತೆರಳಿದ್ದಾರೆ.

ABOUT THE AUTHOR

...view details