ಬೆಂಗಳೂರು: ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವಾರಿಯಾಗಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ನೇಮಕಗೊಂಡಿದ್ದಾರೆ.
ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವರಿಯಾಗಿ ನೇಮಿಸಿ ಆದೇಶ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿರುವ ಸೌಮ್ಯ ರೆಡ್ಡಿ ಅವರನ್ನ ತಮಿಳುನಾಡು ಪ್ರದೇಶ ಮಹಿಳಾ ಕಾಂಗ್ರೆಸ್ ಉಸ್ತುವರಿಯಾಗಿ ನೇಮಿಸಿ ಮಾಜಿ ಸಂಸದೆ ಸುಷ್ಮಿತ ದೇವ್ ಆದೇಶ ಹೊರಡಿಸಿದ್ದಾರೆ.
ಆಪರೇಷನ್ ಕಮಲಕ್ಕೆ ಬಲಿಯಾಗದೆ, ತಂದೆ ಹಾಗೂ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಪಕ್ಷದ ಪರವಾಗಿ ನಿಂತು ಸಮರ್ಥನೆ ಮಾಡಿಕೊಂಡಿದ್ದನ್ನು ಗಮನಿಸಿ, ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸುವ ಮೂಲಕ ತಮ್ಮ ನಿಷ್ಠೆ ಪ್ರದರ್ಶಿಸಿರುವುದನ್ನು ಗಮನಿಸಿ ನೇಮಕ ಮಾಡಲಾಗಿದೆ.
ಯುವ ನಾಯಕಿಯಾಗಿ ಹಾಗೂ ವಿಶೇಷ ಪರಿಸರ ಕಾಳಜಿ ಮೆರೆಯುವ ಮೂಲಕ ಶಾಸಕಿಯಾಗಿ ವರ್ಷದೊಳಗೆ ವಿಶೇಷ ಜನಪ್ರಿಯತೆಯನ್ನು ರಾಜ್ಯಮಟ್ಟದಲ್ಲಿ ಸೌಮ್ಯ ರೆಡ್ಡಿ ಗಳಿಸಿದ್ದು ಪಕ್ಷ ಇವರ ಸೇವೆಯನ್ನು ಗುರುತಿಸಿ ಇನ್ನೊಂದು ಜವಾಬ್ದಾರಿಯನ್ನು ನೀಡಿದೆ.