ಕರ್ನಾಟಕ

karnataka

ETV Bharat / city

ಫುಡ್​​ ಡೆಲಿವರಿ ಮಾಡ್ರೋ ಅಂದ್ರೆ ಹೀಗಾ ಮಾಡೋದು... ಬಾಕ್ಸ್​ನಲ್ಲಿದ್ದ ಹಾವು ನೋಡಿ ಪೊಲೀಸರಿಗೆ ಶಾಕ್​

ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ತಲೆ ಹಾವನ್ನ ಫುಡ್ ಡೆಲಿವರಿ‌ ಬಾಕ್ಸ್​ನಲ್ಲಿಟ್ಟು ಮಾರಾಟ ಮಾಡುತ್ತಿದ್ದ ಇಬ್ಬರು dunzo ಕಂಪೆನಿಯ ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Snake Sale in Food Delivery Box In Bangalore
ಫುಡ್ ಡೆಲಿವರಿ ಬಾಕ್ಸ್​ನಲ್ಲಿಟ್ಟು ಹಾವು ಮಾರಾಟ..ಇಬ್ಬರು ಆರೋಪಿಗಳ ಅರೆಸ್ಟ್​

By

Published : Apr 23, 2020, 8:43 AM IST

ಬೆಂಗಳೂರು:ಲಾಕ್​ಡೌನ್​ ನಡುವೆಯೂ ಫುಡ್​ ಡೆಲಿವರಿಗೆ ಅವಕಾಶ ನೀಡಿರುವುದನ್ನು ದುರ್ಬಳಕೆ ಮಾಡಿಕೊಂಡ ಇಬ್ಬರು‌ ಕಿರಾತಕರು‌, ಎರಡು ತಲೆ‌ಹಾವನ್ನ ಆಹಾರದ‌ ಬಾಕ್ಸ್​ನಲ್ಲಿಟ್ಟು ಮಾರಾಟ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಮಹಮ್ಮದ್ ರಿಜ್ವಾನ್ ಹಾಗೂ ಅಜರ್ ಖಾನ್ ಬಂಧಿತ ಆರೋಪಿಗಳು. ನಗರದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳು ಎರಡು ತಲೆ ಹಾವನ್ನ ಹಿಡಿದು ಮಾರಾಟ ಮಾಡ್ತಿದ್ದಾರೆಂಬ ಮಾಹಿತಿ ತಿಳಿದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ,ಇಬ್ಬರನ್ನ ಬಂಧಿಸಿದ್ದಾರೆ.

ಆರೋಪಿಗಳಿಬ್ಬರು, dunzo ಕಂಪೆನಿಯಲ್ಲಿ ಡೆಲಿವರಿ ಬಾಯ್​ ಆಗಿ‌ ಕೆಲಸ ಮಾಡುತ್ತಿದ್ದರು. ಬಂಧಿತರಿಂದ ಎರಡು ತಲೆ‌ಹಾವು, ದ್ವಿಚಕ್ರ ವಾಹನ, ಮೊಬೈಲ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details