ಕರ್ನಾಟಕ

karnataka

ETV Bharat / city

ಕೊಲೆಯಾದ ಭಜರಂಗದಳ ಕಾರ್ಯಕರ್ತನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತನಿಗೆ ಡಿಜಿಪಿ ಪ್ರತಿಕ್ರಿಯೆ - ವಿದೇಶಿ ಪತ್ರಕರ್ತನಿಗೆ ಪ್ರವೀಣ್ ಸೂದ್ ಪ್ರತಿಕ್ರಿಯೆ

ಕೊಲೆಯಾದ ಭಜರಂಗದ ಕಾರ್ಯಕರ್ತನಿಗೆ ಭಯೋತ್ಪಾದನೆ ಅಥವಾ ತ್ರಿಪುರಾ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಿದೇಶಿ ಪತ್ರಕರ್ತನಿಗೆ ರಾಜ್ಯದ ಡಿಜಿಪಿ ಪ್ರತಿಕ್ರಿಯೆ ನೀಡಿದ್ದಾರೆ.

Slain Bajrang Dal activist a 'terrorist', claims foreign journalist; Karnataka DGP reacts
ಭಜರಂಗದ ಕಾರ್ಯಕರ್ತನ ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ.. ಡಿಜಿಪಿ ಪ್ರತಿಕ್ರಿಯೆ

By

Published : Feb 22, 2022, 2:32 AM IST

Updated : Feb 22, 2022, 5:56 AM IST

ಬೆಂಗಳೂರು:ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಪತ್ರಕರ್ತ ತನ್ನ ಟ್ವಿಟರ್​ ಖಾತೆಯಲ್ಲಿ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿದ್ದು, ವಿದೇಶಿ ಪತ್ರಕರ್ತನ ಮಾಹಿತಿ ತಪ್ಪು ಎಂದು ಡಿಜಿಪಿ ಪ್ರವೀಣ್ ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

ನವೆಂಬರ್‌ನಲ್ಲಿ ತ್ರಿಪುರಾದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿದ ಹಿಂದೂ ಉಗ್ರಗಾಮಿ ಸಂಘಟನೆಯಾಗಿರುವ ಭಜರಂಗದಳಕ್ಕೆ ಸೇರಿದ ಭಯೋತ್ಪಾದಕನನ್ನು ನಿನ್ನೆ ರಾತ್ರಿ ಕೊಲ್ಲಲಾಗಿದೆ ಎಂದು ಬೈಲೈನ್ ಟೈಮ್ಸ್ ವರದಿಗಾರನೆಂದು ಟ್ವಿಟರ್ ಖಾತೆಯಲ್ಲಿ ಪರಿಚಯಿಸಿಕೊಂಡಿರುವ ಸಿಜೆ ವಾರ್ಲೆಮನ್ ಎಂಬಾತ ಟ್ವೀಟ್ ಮಾಡಿದ್ದನು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಜಿಪಿ ಪ್ರವೀಣ್ ಸೂದ್, ವಾರ್ಲೆಮನ್ ಅವರ ಆರೋಪವನ್ನ ನಿರಾಕರಿಸಿದ್ದಾರೆ. ಹತ್ಯೆಯಾದ ವ್ಯಕ್ತಿಗೆ ಭಯೋತ್ಪಾದನೆ ಅಥವಾ ತ್ರಿಪುರಾ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣ ಸುಳ್ಳು. ಈ ವ್ಯಕ್ತಿಯ ಸಾವಿಗೂ, ಭಯೋತ್ಪಾದನೆಗೂ ತ್ರಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಜಿಪಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣ: 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಶಾಸಕ ಎಂಪಿ ರೇಣುಕಾಚಾರ್ಯ

Last Updated : Feb 22, 2022, 5:56 AM IST

ABOUT THE AUTHOR

...view details