ಕರ್ನಾಟಕ

karnataka

ETV Bharat / city

ಕರ್ಕಶ ಶಬ್ದ : ದೋಷಪೂರಿತ ಸೈಲೆನ್ಸರ್ ಅಳವಡಿಸಿದ್ದ 4 ವಾಹನಗಳು ಪೊಲೀಸ್​ ವಶಕ್ಕೆ

ಬೆಂಗಳೂರು ನಗರದ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಂಚಾರ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬೈಕ್‌ಗಳಿಗೆ ದೋಷಪೂರಿತ ಸೈಲೆನ್ಸರ್‌ ಅಳವಡಿಸುತ್ತಿದ್ದ ಪ್ಯಾರಾಮೌಂಟ್ ಆಟೋ ಮೊಬೈಲ್ಸ್ ಹಾಗೂ ಕೆಂಗೇರಿಯ ಶೈನ್ ಕಾರ್ ಸ್ಪಾ ಮೇಲೆ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್
police

By

Published : Jul 31, 2021, 7:48 AM IST

ಬೆಂಗಳೂರು: ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದ ಪ್ಯಾರಾಮೌಂಟ್ ಆಟೋ ಮೊಬೈಲ್ಸ್ ಹಾಗೂ ಕೆಂಗೇರಿಯ ಶೈನ್ ಕಾರ್ ಸ್ಪಾ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನೆಡಸಿ ದೋಷಪೂರಿತ ಸೈಲೆನ್ಸರ್ ಅಳವಡಿಸಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯನಗರದ ಪ್ಯಾರಾಮೌಂಟ್ ಆಟೋ ಮೊಬೈಲ್ಸ್​ನಲ್ಲಿ 10 ಕ್ಕೂ ಹೆಚ್ಚು ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದೇವೆ. ಕೆಂಗೇರಿಯ ಶೈನ್ ಕಾರ್ ಸ್ಪಾ ನಲ್ಲಿ 2 ವಾಹನಗಳನ್ನು ಹಾಗೂ ಜ್ಞಾನಭಾರತಿ ಆರ್.ಟಿ.ಒ ವ್ಯಾಪ್ತಿಯಲ್ಲಿ 2 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಾಜರಾಜೇಶ್ವರಿ ನಗರದ ಆರ್​ಟಿಓ ಸೌಂದರ್ಯ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ಬೈಕ್​ಗಳಿಗೆ ಅಳವಡಿಸಿಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿತ್ತು. ಬುಲೆಟ್‌ಗಳಿಗೆ ಹೆಚ್ಚು ಅಳವಡಿಸಿಕೊಂಡು ಸಾರ್ವಜನಿಕ ಸ್ಥಳ ಹಾಗೂ ಜನವಸತಿ ಪ್ರದೇಶಗಳಲ್ಲಿ ವೇಗವಾಗಿ ಹೋಗುತ್ತಿದ್ದರು. ಈ ಸಂಬಂಧ ಸಂಚಾರ ಪೊಲೀಸರು ಕೂಡ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಅಂತಹ ದ್ವಿಚಕ್ರ ವಾಹನಗಳ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಜೊತೆಗೆ ಆರ್‌ಟಿಒ ಕಚೇರಿಗೆ ಸಹ ಈ ಬಗ್ಗೆ ದೂರುಗಳು ಬಂದಿದ್ದವು. ಈ ಮಾಹಿತಿ ಮೇರೆಗೆ ಜಂಟಿ ಪ್ರಾದೇಶಿಕ ಸಾರಿಗೆ ಆಯುಕ್ತ ಕೆ. ಟಿ ಹಾಲಸ್ವಾಮಿ ನೇತೃತ್ವದಲ್ಲಿ, ಸಹಾಯಕ ಪ್ರಾದೇಶಿಕ ಅಧಿಕಾರಿ ರಾಜಣ್ಣ, ವಾಹನ ನೀರಿಕ್ಷಕ ಸುಧಾಕರ್, ರಂಜಿತ್ ಸೇರಿದಂತೆ 8 ಸಿಬ್ಬಂದಿ ದಾಳಿ ನಡೆಸಿ ಒಟ್ಟು 4 ವಾಹನಗಳು, 10ಕ್ಕೂ ಅಧಿಕ ದೋಷಪೂರಿತ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದಿದ್ದೇವೆ ಎಂದು ಸೌಂದರ್ಯ ತಿಳಿಸಿದ್ದಾರೆ.

ABOUT THE AUTHOR

...view details