ಕರ್ನಾಟಕ

karnataka

ETV Bharat / city

ಗುರಾಯಿಸಿದ್ದಕ್ಕೆ ಗಲಾಟೆ, ಕ್ಷುಲ್ಲಕ ಕಾರಣಕ್ಕೆ ಫೈರಿಂಗ್​... ಮೂವರು ಅಂದರ್​ - ಮೂವರು ಆರೋಪಿ

ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ

ಗಾಳಿಯಲ್ಲಿ ಗುಂಡು ಹಾರಿಸಿ, ಬಡಿದಾಡಿಕೊಂಡ ಆರೋಪಿಗಳ ಬಂಧನ

By

Published : Mar 5, 2019, 5:39 PM IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಉದ್ಯಮಿ ಮನೋಜ್, ಕರವೇಯಲ್ಲಿ ಗುರ್ತಿಸಿಕೊಂಡಿದ್ದ ಆದರ್ಶ್​ ಹಾಗೂ ಮತ್ತೊಬ್ಬನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿ, ಬಡಿದಾಡಿಕೊಂಡ ಆರೋಪಿಗಳ ಬಂಧನ

ಆಗಿದ್ದೇನು?

ಕಳೆದ ಎರಡು ದಿನಗಳ ಉದ್ಯಮಿ ಮನೋಜ್ ಜೊತೆ ಆತನ ತಮ್ಮ ಹಾಗೂ ಸ್ನೇಹಿತರು ರಾಜಾಜಿನಗರದ ಬಾಶಂ ಸರ್ಕಲ್ ಬಳಿಯಿರುವ ಎಸ್​ವಿ ಬಾರ್​​ಗೆ ತೆರಳಿದ್ದರು. ಇದೇ ವೇಳೆ ಆದರ್ಶ್ ಹಾಗೂ ಆತನ ಗ್ಯಾಂಗ್​ ಸಹ ಅಲ್ಲಿಯೇ ಇತ್ತು. ಆದರ್ಶ್, ಮನೋಜ್​ನನ್ನು ಗುರಾಯಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿದೆ. ಬಾರ್​ನಿಂದ ಹೊರ ಬಂದು ಏಕಾಏಕಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಉದ್ಯಮಿ ಮನೋಜ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ತಿಳಿದುಬಂದಿದೆ. ತಕ್ಷಣ ಸ್ಥಳದಲ್ಲಿದ್ದವರೆಲ್ಲಾ ಎಸ್ಕೇಪ್ ಆಗಿದ್ರು.

ಘಟನೆ ಸಂಬಂಧ ರಾಜಾಜಿನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಗಳಾ ಮನೋಜ್, ಆದರ್ಶ್​ ಹಾಗೂ ಮತ್ತೊಬ್ಬನನ್ನು ಬಂಧಿಸಿದ್ದಾರೆ. ತಲೆಮೆರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಉದ್ಯಮಿ ಮನೋಜ್ ಲೈಸನ್ಸ್​ ಪಡೆದು ರಿವಾಲ್ವರ್ ಇಟ್ಟುಕೊಂಡಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಹೊರವಲಯದಲ್ಲಿ ಆತನ ಫಾರ್ಮ್ ಹೌಸ್ ಇದ್ದು, ಸೇಫ್ಟಿಗಾಗಿ ರಿವಾಲ್ವರ್ ಇಟ್ಟುಕೊಂಡಿದ್ದಾಗಿ ಹೇಳಿದ್ದಾನೆ. ಇನ್ನೂ ಆರೋಪಿ ಆದರ್ಶ್ ವಿರುದ್ಧ ಈ ಹಿಂದೆ ಕೆಲವೊಂದು ಆರೋಪಗಳು ಕೇಳಿಬಂದಿದ್ದವು. ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯಲ್ಲಿ ಆದರ್ಶ್​ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ABOUT THE AUTHOR

...view details