ಬೆಂಗಳೂರು :ನಗರದಲ್ಲಿಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆ ಹೆಚ್ಚು ಸೋಂಕಿತ ಪ್ರಕರಣ ವರದಿಯಾದ ಐದು ಪ್ರದೇಶಗಳನ್ನು ನಾಳೆಯಿಂದಲೇ ಸೀಲ್ಡೌನ್ ಮಾಡುವುದಾಗಿ ಪಾಲಿಕೆ ಆಯುಕ್ತ ಬಿ ಹೆಚ್ ಅನಿಲ್ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅನ್ಲಾಕ್ ಬಳಿಕ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ಹೆಚ್ಚು ಸೋಂಕಿತ ಪ್ರದೇಶಗಳನ್ನು ಕೂಡಲೇ ಲಾಕ್ಡೌನ್ ಮಾಡಬೇಕು. ಜನರ ಅನವಶ್ಯಕ ಓಡಾಟ ತಡೆಯಬೇಕು ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಇಡೀ ವಾರ್ಡ್ ಸೀಲ್ಡೌನ್ ಆಗುವುದಿಲ್ಲ.