ಬೆಂಗಳೂರು:ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ ಅಂಗವಾಗಿ ನಗರದ ಯಲಹಂಕದಲ್ಲಿ ಆಯೋಜಿಸಿದ್ದ ಏಕತೆಗಾಗಿ ಓಟದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ವಲ್ಲಭಬಾಯಿ ಪಟೇಲ್ ಜಯಂತಿ: 'ಏಕತೆಗಾಗಿ ಓಟ'ದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿ
ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 144ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಯಿತು.
sardar-vallabha-bai-patel-birthday
ಶಾಸಕ ಎಸ್.ಆರ್.ವಿಶ್ವನಾಥ್ ಅವರು ಈ ಓಟಕ್ಕೆ ಚಾಲನೆ ನೀಡಿದರು.
ಯಲಹಂಕದ ಡೈರಿ ಸರ್ಕಲ್ನಿಂದ ಜ್ಞಾನಜ್ಯೋತಿ ಶಾಲೆಯವರೆಗೂ, ಸರ್ದಾರ್ ವಲ್ಲಭಭಾಯಿ ಪಟೇಲ್ಗೆ ಜೈ ಎಂದು ಕೂಗುತ್ತಾ ಸಾಗಿದ್ರು. ಯಲಹಂಕ ಕ್ಷೇತ್ರದ ಬಿಜೆಪಿ ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಈ ವೇಳೆ ಪಾಲ್ಗೊಂಡಿದ್ದರು.