ಕರ್ನಾಟಕ

karnataka

ETV Bharat / city

ರೋಡ್ ಟ್ಯಾಕ್ಸ್ ಕಟ್ಟದೇ ಕೋಟ್ಯಂತರ ರೂಪಾಯಿ ವಂಚನೆ : ಮತ್ತೊಬ್ಬ ಡೇಟಾ ಎಂಟ್ರಿ ಆಪರೇಟರ್ ವಿರುದ್ಧ ಕೇಸ್ - ಡೇಟಾ ಎಂಟ್ರಿ ಆಪರೇಟರ್ ವಿರುದ್ಧ ಕೇಸ್ ದಾಖಲು

ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿ(RTO) ಗೆ ರೋಡ್ ಟ್ಯಾಕ್ಸ್ ಕಟ್ಟದೇ ವಂಚಿಸುದ ಪ್ರಕರಣದಲ್ಲಿ ಮತ್ತೊಬ್ಬ ಡೇಟಾ ಎಂಟ್ರಿ ಆಪರೇಟರ್ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

road-tax-fraud
ಆರ್​ಟಿಓಗೆ ತೆರಿಗೆ ವಂಚನೆ

By

Published : Aug 3, 2022, 3:28 PM IST

ಬೆಂಗಳೂರು: ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಪಂಗನಾಮ ಹಾಕಿ ಕೋಟಿ ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಸಂಬಂಧ ಬಗೆದಷ್ಟು ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಆರ್‌ಟಿಓ ಕೋಟಿ ಕೋಟಿ ವಂಚನೆಯ ಜಾಲದಿಂದ ಹಲವಾರು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ನಕಲಿ ಚಲನ್‍ಗಳನ್ನು ಅಪ್ಲೋಡ್ ಮಾಡಿ ವಂಚಿಸಿರುವುದು ತಿಳಿದುಬಂದಿದೆ.

ರೋಡ್ ಟ್ಯಾಕ್ಸ್ ಕಟ್ಟದೇ ಸುಮಾರು 50 ಕೋಟಿ ರೂ.ಗೂ ಅಧಿಕ ಹಣವನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ ಎನ್ನಲಾಗುತ್ತಿದೆ. ಇದೇ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸರು ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಚಿತ್ರನಟಿ ರಾಗಿಣಿ ಅವರ ಸ್ನೇಹಿತನಾಗಿದ್ದ ರವಿಶಂಕರ್ ಹಾಗೂ ಅಜಯ್‍ಗೆ ಖಾಕಿ ಕೋಳ ತೊಡಿಸಿತ್ತು.

ಹಲವು ಆರ್‌ಟಿಓ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಕೋಟ್ಯಂತರ ರೂ. ಹಣವನ್ನು ಗುಳುಂ ಮಾಡಿದ್ದಾರಂತೆ. ಇದೀಗ ಮಲ್ಲೇಶ್ವರಂ ಪೊಲೀಸರು ವಂಚನೆ ಎಸಗಿರುವ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದಾರೆ. ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಿಸಲಾಗಿದೆ.

ಡೇಟಾ ಎಂಟ್ರಿ ಆಪರೇಟರ್ ಸಂತೋಷ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೋರಮಂಗಲದ ಆರ್‌ಟಿಓದಲ್ಲಿ ಸಂತೋಷ್‍ ಡಾಟಾ ಎಂಟ್ರಿ ಆಪರೇಟರ್ ಆಗಿದ್ದರು. 2015 ರಿಂದ 2019 ರವರೆಗೂ 300ಕ್ಕೂ ಹೆಚ್ಚು ಲೈಫ್ ಟೈಮ್ ಟ್ಯಾಕ್ಸ್ ವಂಚಿಸಿರುವುದಾಗಿ ತಿಳಿದುಬಂದಿದ್ದು, ಪ್ರಕರಣದ ಜಾಡು ಹಿಡಿದು ಖಾಕಿ ಟೀಂ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ :ಅಕ್ರಮ ಆಸ್ತಿ ಗಳಿಕೆ ಸಾಬೀತು: ಸಿಸಿಬಿ ಇನ್ಸ್‌ಪೆಕ್ಟರ್​ಗೆ 4 ವರ್ಷ ಜೈಲು, ₹50 ಲಕ್ಷ ದಂಡ, ಪತ್ನಿಗೂ ಶಿಕ್ಷೆ

ABOUT THE AUTHOR

...view details